ಗುರು, ಹೆತ್ತವರ ಋಣ ತೀರಿಸಲಾಗದು

sulibele 1
ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಜಗತ್ತಿನಲ್ಲಿ ಎಲ್ಲ ಋಣಗಳನ್ನು ತೀರಿಸಬಹುದು, ಆದರೆ ತಂದೆ-ತಾಯಿ ಹಾಗೂ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ಅವರಿಗೆ ಗೌರವ ಸಮರ್ಪಿಸುವ ಮೂಲಕ ಋಣ ತೀರಿಸಿಕೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.
ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳ ಜೀವನ ಹಸನಾಗಿಸಲು ತಮ್ಮ ಜೀವನವನ್ನೇ ಮುಡುಪಾಗಿಡುವ ಪಾಲಕರಿಗೆ, ಮಕ್ಕಳು ಉತ್ತಮ ಫಲಿತಾಂಶ ನೀಡುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ದೇವಾಲಪುರ ಕಾಲೇಜು ಪ್ರಾಚಾರ್ಯೆ ತ್ರೀವೇಣಿ ಮಾತನಾಡಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಎಂಬ ಯುದ್ಧಕ್ಕೆ ಸಿದ್ಧರಾಗಬೇಕು. ಉತ್ತಮ ಫಲಿತಾಂಶ ನೀಡುವ ಮೂಲಕ ಇಲಾಖೆಗೆ ಕೀರ್ತಿ ತರಬೇಕು. ಕಾಲೇಜಿನ ರಾಯಭಾರಿಗಳಾಗಿ ಮುಂದಿನ ವರ್ಷದಲ್ಲಿ ತಾವುಗಳು ದಾಖಲಾತಿ ಹೆಚ್ಚಿಸಲು ಸಹಕಾರ ನೀಡಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಸುಬ್ರಮಣಿ ಮಾತನಾಡಿ, ಭವಿಷ್ಯ ಭಾರತದ ನಿರ್ಮಾಣದ ಕನಸು ಕಾಣಬೇಕು. ಯುವಶಕ್ತಿಯಿಂದ ಮಾತ್ರ ಸದೃಡ ದೇಶ ಕಟ್ಟಲು ಸಾಧ್ಯ. ಉತ್ತಮ ಶಿಕ್ಷಣ ಪಡೆದ ಯುವಶಕ್ತಿಯಿಂದ ನವ, ಬಲಿಷ್ಠ ಭಾರತ ಕಟ್ಟುವ ಕೆಲಸವಾಗುತ್ತದೆ. ಎಲ್ಲದ್ದಕ್ಕೂ ಶಿಕ್ಷಣವೇ ಅಸ್ತ್ರ ಎಂದರು.
ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಯುವ ಮುಖಂಡರಾದ ಜಿ.ನಾರಾಯಣಗೌಡ, ಬಿ.ಎನ್.ಗೋಪಾಲಗೌಡರು ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಉಪನ್ಯಾಸಕ ಮೃತ್ಯುಂಜಯ, ನಿವೃತ್ತ ಪ್ರಾಚಾರ್ಯ ಚನ್ನಪ್ಪ, ಪ್ರಾಂಶುಪಾಲ ಸುಬ್ರಹ್ಮಣಿ, ಗ್ರಾ.ಪಂ. ಅಧ್ಯಕ್ಷ ಜನಾರ್ಧನರೆಡ್ಡಿ, ಮುಖಂಡ ಜಿಯಾವುಲ್ಲಾ, ಎಸ್‌ಡಿಎಂಸಿ ಸದಸ್ಯ ಪ್ರಶಾಂತ್, ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ, ಸಬೀರ್, ಉಪನ್ಯಾಸಕರಾದ ಕುಮಾರ್, ವಿಜಯ ಗಂಗಾಧರ್, ನಾಗರಾಜ್, ಶ್ರೀಕೃಪಾ, ರೇಷ್ಮಾನಾಯಕ್, ಸರಸ್ವತಿ, ಅಶ್ವಿನಿ, ಸುಷ್ಮಾ, ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net