ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

New Project (29)
Published on

ಉಳ್ಳಾಲ: ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ 2025ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಸಹಕಾರಿ ಸಂಘದ ನಿರ್ದೇಶಕರಿಗೆ ಬಿಳ್ಕೋಡುಗೆ ಕಾರ್ಯಕ್ರಮ ಮಂಗಳೂರು ಬಂದರ್‌ನ ಬಹರ್-ಎ-ನೂರ್ ಸಭಾಂಗಣದಲ್ಲಿ ನಡೆಯಿತು.

ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ನಿರ್ದೇಶಕ ಟಿ.ಎಚ್.ಹಮೀದ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುಲ್ ಲತೀಫ್ ಡಿ., ಸದಸ್ಯ ಹನೀಫ್ ತೋಟಬೆಂಗ್ರೆ, ಫಯಾಝ್ ಉಳ್ಳಾಲ್, ಮುಹಮ್ಮದ್ ಮುಸ್ಲಿಯಾರ್ ಇರಾ ಅವರನ್ನು ಬೀಳ್ಕೊಡಲಾಯಿತು. ಸಂಘ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು.

ಬಹರ್-ಎ-ನೂರು ಕಟ್ಟಡದ ಪೈಟಿಂಗ್ ಗುತ್ತಿಗೆದಾರ ಗಿರೀಶ್ ಕುಮಾರ್ ಕದ್ರಿ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಬಿ.ಆಹ್ಮದ್ ಬಾವಾ, ನಿರ್ದೇಶಕರಾದ ಯು.ಟಿ.ಆಹ್ಮದ್ ಶರೀಫ್, ಬಿ.ಇಬ್ರಾಹಿಂ ಖಲೀಲ್, ಎ.ಎಂ.ಕೆ.ಮೊಹಮ್ಮದ್ ಇಬ್ರಾಹಿಂ, ಎಸ್.ಎಂ.ಇಬ್ರಾಹಿಂ, ಮೊಹಮ್ಮದ್ ಆಶ್ರಫ್, ಎಸ್.ಕೆ.ಇಸ್ಮಾಯಿಲ್, ಸದಸ್ಯರಾದ ಎಂ.ಎ.ಗಫೂರ್, ಶಂಶುದ್ದೀನ್ ಕುದ್ರೋಳಿ, ಯು.ಎಫ್.ಇಕ್ಬಾಲ್, ಮುನೀರ್ ಎಂಎನ್‌ಆರ್, ಮೊಹಮ್ಮದ್ ಎಂಎಕ್ಸ್‌ಎಂ, ರಹಿಮಾನ್ ಸಾಗರ್, ಸಲಹೆಗಾರ ಮಯ್ಯದಿ ಕಾರ್ನಾಡ್ ಉಪಸ್ಥಿತರಿದ್ದರು.

ಸಲಹೆಗಾರ ಮುಸ್ತಫಾ ಹರೇಕಳ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುಲ್ ಲತೀಫ್ ಡಿ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net