ಒಗ್ಗಟ್ಟಿದ್ದಲ್ಲಿ ಗ್ರಾಮದ ಅಭಿವೃದ್ಧಿ : ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ರಾಹಿಂ ಅಭಿಪ್ರಾಯ

24-konaje
Published on

ಉಳ್ಳಾಲ: ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಸಹಕಾರ ಭಾವನೆಯಲ್ಲಿ ಕೆಲಸ ಮಾಡಿ ಪದೋನ್ನತಿಗೊಂಡು ವರ್ಗಾವಣೆಯಾಗುತ್ತಿರುವ ದಿನೇಶ್ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಮುಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.

26 ವರ್ಷಗಳಿಂದ ಕೊಣಾಜೆ ಗ್ರಾಪಂಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಕೊಳ್ನಾಡು ಗ್ರಾಪಂಗೆ ಪದನ್ನೋತಿಯಾಗಿ ವರ್ಗಾವಣೆಗೊಂಡಿರುವ ದಿನೇಶ್ ಅವರಿಗೆ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್, ಮಾಜಿ ಅಧ್ಯಕ್ಷರಾದ ಅಚ್ಯುತ ಗಟ್ಟಿ, ಶೌಕತ್ ಆಲಿ, ನಝರ್ ಷಾ, ಸೂಫಿಕುಂಞಿ, ಮಾಜಿ ಉಪಾಧ್ಯಕ್ಷ ರಾಜಾರಾಂ ರೈ, ರಾಮಕೃಷ್ಣ ಪಟ್ಟೋರಿ, ಕರುಣಾಕರ ಕಾನ, ಪ್ರಭಾ ಪದ್ಮರಾಜ್, ಪಂಚಾಯಿತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಿತ್ರಾ ಶೆಟ್ಟಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net