

ನೆಲ್ಯಾಡಿ: ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ. ವಿದ್ಯಾರ್ಥಿಗಳು ನಾಳೆ ಎಲ್ಲಿ ಹೋದರೂ, ಎಲ್ಲಿ ಕೆಲಸ ಮಾಡಿದರೂ ಅದನ್ನು ನಿಷ್ಠೆಯಿಂದಲೂ, ಶ್ರದ್ಧೆಯಿಂದಲೂ ಪ್ರಾಮಾಣಿಕತೆಯಿಂದಲೂ ಮಾಡಿ ಎಂದು ಜಾರ್ಜ್ ಸ್ಯಾಮುವೆಲ್ ಒಐಸಿ ಹೇಳಿದರು.
ಬೆಥನಿ ಐಟಿಐಯಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಸಂಚಾಲಕ ಜೈಸನ್ ಸೈಮನ್, ಪ್ರಾಚಾರ್ಯ ಸಜಿ ಕೆ.ಥೋಮಸ್, ತರಬೇತಿ ಅಧಿಕಾರಿ ಜಾನ್ ಪಿ.ಎಸ್, ಸಿಬ್ಬಂದಿ ಕಾರ್ಯದರ್ಶಿ ಹರಿಪ್ರಸಾದ್ ರೈ ಶುಭ ಹಾರೈಸಿದರು.
ಕಿರಿಯ ತರಬೇತಿ ಅಧಿಕಾರಿಗಳಾದ ಜೇಮ್ಸ್ ಕೆ.ಎ. ಸ್ವಾಗತಿಸಿದರು. ವರ್ಗೀಸ್ ಎನ್.ಟಿ. ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ನಿರೂಪಿಸಿದರು.