

ಹನೂರು: ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆಯುತ್ತಿದ್ದ ಕನ್ನಡ ಚಲನಚಿತ್ರವೊಂದರ ಶೂಟಿಂಗ್‌ನಲ್ಲಿ ನಟ ವಿಜಯ್ ರಾಘವೇಂದ್ರ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ಗ್ರಾಮದ ಶಾಲೆಯ ಆವರಣದಲ್ಲಿ ನಟ ವಿಜಯ್ ರಾಘವೇಂದ್ರ ಅವರು ಚಲನಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ತಿಳಿದ ಯುವಕರು ಸೇರಿದಂತೆ ಗ್ರಾಮಸ್ಥರ ದಂಡೇ ನೆರೆದಿತ್ತು. ಕುತೂಹಲದಿಂದ ಕೆಲಕಾಲ ಶೂಟಿಂಗ್ ವೀಕ್ಷಿಸಿದರು. ಬಳಿಕ ಯುವಕರು ಉತ್ಸಾಹದಿಂದ ವಿಜಯ್ ರಾಘವೇಂದ್ರ ಅವರಿಗೆ ಹಸ್ತ ಲಾಘವ ನೀಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.