ಶಾಸಕ ಅಬ್ಬಯ್ಯ ಅಭಿಮಾನಿಗಳಿಂದ ರಕ್ತದಾನ

smk nagar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹು-ಧಾ ಪೂರ್ವ ಶಾಸಕ ಹಾಗೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಜನ್ಮದಿನದ ನಿಮಿತ್ತ ಎಸ್.ಎಂ. ಕೃಷ್ಣಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರಸಾದ ಅಬ್ಬಯ್ಯ ಅಭಿಮಾನಿ ಬಳಗದಿಂದ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 100ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.

ಶಿಬಿರಕ್ಕೆ ಚಾಲನೆ ನೀಡಿದ ಡಾ.ಅನಿಲಕುಮಾರ ಮಾತನಾಡಿ, ರಕ್ತದಾನ ಮಹಾದಾನ. ಆರೋಗ್ಯವಂತ ಭಾರತ ನಿರ್ವಣವಾಗಬೇಕಾದರೆ ಯುವಕರು ರಕ್ತದಾನ ಮಾಡಬೇಕು. ರಕ್ತವು ಜೀವವನ್ನು ಉಳಿಸುತ್ತದೆ. ದಾನಗಳಲ್ಲಿ ರಕ್ತದಾನ ಮಹಾದಾನ. ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಹುಲಗಣ್ಣ, ಸಲೀಂ ಮುಲ್ಲಾ, ಡಿಟಿಓ ಡಾ. ರವೀಂದ್ರ ಬೋವೇರಾ, ಕಾಂಗ್ರೆಸ್ ಮುಖಂಡರಾದ ನಾಸಿರ್ ಅಸುಂಡಿ, ಮುಸ್ತಾಕ್ ಅತ್ತಾರ್, ಆರೀಫ್ ದೊಡ್ಡಮನಿ, ಶಕೀಲ್ ಅಹ್ಮದ್ ಮಸಳಿ, ರವಿಕುಮಾರ್ ಮಾನಶೆಟ್ಟರ್, ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾದಾರ, ರಾಜಕುಮಾರ ಕಾಮರೆಡ್ಡಿ, ಮೆಹಬೂಬ್ ನಾಲಬಂದ್, ಕುಮಾರ ಕುಂದನಹಳ್ಳಿ, ಶ್ರೀನಿವಾಸ ಬೆಳದಡಿ, ಶರೀಫಸಾಬ್ ನದಾಫ್, ಇರ್ಷಾದ್ ಅಹ್ಮದ್ ಕಾರಡಗಿ, ಅಸ್ಲಮ್ ನವಲಗುಂದ, ಅಕ್ಕಮ್ಮ ಕಂಬಳಿ, ಚೇತನಾ ಲಿಂಗದಾಳ, ವೈದ್ಯರಾದ ಡಾ. ಅಶ್ವಿನ್, ಡಾ.ಸುದೀಪ್, ಡಾ. ಸಾಚಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net