ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳ ಸಂಭ್ರಮಾಚರಣೆ

rcb
Published on

ಮುಂಡರಗಿ: ಆರ್‌ಸಿಬಿ ಐಪಿಎಲ್ 2025ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಮಂಗಳವಾರ ರಾತ್ರಿಯೇ ಸಂಭ್ರಮಾಚರಣೆ ಮಾಡಿದರು.

ಆರ್‌ಸಿಬಿ ಗೆಲುವಿಗಾಗಿಯೇ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ಕಡೆಗಳಲ್ಲಿ ದೇಸ್ಥಾನದಲ್ಲಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಹ ಸಲ್ಲಿಸಿದ್ದರು. ‘ಈ ಸಲ ಕಪ್ ನಮ್ದೇ’ ಎನ್ನುವಂತ 18 ವರ್ಷದ ಕನಸು ಈ ಸಾರಿ ನನಸಾಗಿದ್ದು, ಈ ಸಲ ಕಪ್ ನಮ್ದು ಎಂದು ಸಂಭ್ರಮಿಸಿದರು.

ಆರ್‌ಸಿಬಿ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಆರ್‌ಸಿಬಿ-ಪಂಜಾಬ್ ಫೈನಲ್ ಪಂದ್ಯ ವೀಕ್ಷಣೆಗೆ ಆರ್‌ಸಿಬಿ ಫ್ಯಾನ್ಸ್ ವಿವಿಧ ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆಗಳನ್ನು ಮಾಡಿದ್ದರು.

ಕೊಪ್ಪಳ ಸರ್ಕಲ್ ಭಾಗ, ಜಾಗೃತ್ ಸರ್ಕಲ್, ಹುಡ್ಕೋ, ಎಸ್‌ಎಸ್ ಪಾಟೀಲ ನಗರ ಮೊದಲಾದ ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀೀನ್ ಹಾಕಲಾಗಿತ್ತು. ಕೆಲವೆಡೆ ಗುಂಪು ಗುಂಪುವಾಗಿ ಸೇರಿ ಟಿವಿಯಲ್ಲಿ ಪಂದ್ಯ ವೀಕ್ಷಣೆ ಮಾಡಿದರು. ಆರ್‌ಸಿಬಿ ಗೆಲುವು ಸಾಧಿಸಿದ ನಂತರ ಚಪ್ಪಾಳೆ ತಟ್ಟಿ, ಪರಸ್ಪರ ಬಣ್ಣ ಎರಚಿಕೊಂಡು, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net