

ವಿಜಯವಾಣಿ ಸುದ್ದಿಜಾಲ ಗದಗ
ವೈಯಕ್ತಿಕ ಬದುಕಿನೊಂದಿಗೆ ಇನ್ನಿತರರ ಬದುಕಿನ ಬಗ್ಗೆ ಚಿಂತನೆ, ಸಮಾಜದೊಡನೆ ಸ್ನೇಹ ಭಾವಹೊಂದಿ ರಾಷ್ಟ್ರ ಸೇವೆಗೆ ಸನ್ನದ್ಧನಾಗಿರುವುದು ಮಾನವೀಯ ಮೌಲ್ಯಗಳಾಗಿವೆ ಎಂದು ಬಸವೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಹೇಳಿದರು.
ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆಯ ಸಾಧಕರು ಶನಿವಾರ ಏರ್ಪಡಿಸಿದ್ದ ವಿಶ್ವ ಅರ್ಹತೆಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಉನ್ನತ ಶಿಕ್ಷಣ ಪದವಿ, ಇನ್ನಿತರೆ ಸಟಿರ್ಫಿಕೇಟ್ ಅರ್ಹತೆ ಜೊತೆಗೆ ನಾವು ಸಮಾಜಮುಖಿ ಸೇವಾರ್ಹತೆ ಪಡೆದು ಬದುಕಿದರೆ ನಮ್ಮದು ಸಾರ್ಥಕ ಜೀವನ ಆಗುವುದು ಎಂದು ಹೇಳಿದರು.
ಮಾನವೀಯ ಮೌಲ್ಯಗಳನ್ನು ಪರಿಪಾಲಿಸಿ ಸಂರಸುವುದು ನಮ್ಮ ಕರ್ತವ್ಯ. ನೌಕರಿ ಪಡೆಯಲು, ಉದ್ಯೋಗಾವಕಾಶ ಹೊಂದಲು, ಶಾಲಾ&ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅಗತ್ಯವಿರುವ ಕೆಲವು ಅರ್ಹತೆಗಳು ನಮಗಿರಬೇಕು. ಹೀಗೆ ಮಾನವ ಮಾನವನಾಗಿರಲು ಪ್ರೀತಿ, ವಿಶ್ವಾಸ, ಕರುಣೆ, ಶ್ರದ್ಧೆ, ನಂಬಿಕೆ, ಸೇವೆ ಇನ್ನಿತರೆ ಮಾನವೀಯತೆಯ ಗುಣಗಳ ಅರ್ಹತೆ ಹೊಂದಿರಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ಪರಿಪಾಲನೆಯು ಮಾನವನಿಗಿರಬೇಕಾದ ಅರ್ಹತೆಯಾಗಿದೆ ಎಂದು ಗೌಡರ ತಿಳಿಸಿದರು.
ಉದ್ಯಮಿ ವಿನಯ ಹಿರೇಮಠ ಮಾತನಾಡಿ, ಬಾಲ್ಯಾವಸ್ಥೆಯಿಂದಲೇ ನಾವು ನಮ್ಮ ಭಾರತೀಯ ಪರಂಪರೆ, ಆಚಾರ ವಿಚಾರ, ಊಟ ಉಡಿಗೆ, ವಿದ್ಯೆ ವಿನಯಗಳನ್ನು ಅರಿತು ನಡೆದರೆ ಆದರ್ಶ ವ್ಯಕ್ತಿಗಳು ಆಗುತ್ತೇವೆ. ನಮ್ಮಂತೆ ನಮ್ಮ ಜನಾಂಗ, ನಮ್ಮ ಪರಿಸರಗಳು ಆದರ್ಶಮಯವಾಗಿ ವಿಶ್ವ ಮಾನ್ಯತೆಗೆ ಅರ್ಹರಾಗುತ್ತೇವೆ ಎಂದು ಹೇಳಿದರು.
ಕೆ. ಎಸ್. ಪಲ್ಲೆದ, ವಿಜಯಲಕ್ಷಿ$್ಮ ಆನೆಹೊಸೂರ, ಸುಲೋಚನಾ ಐಹೊಳ್ಳಿ, ಅರುಣಾ ಇಂಗಳಳ್ಳಿ, ಡಾ. ಎಂ. ವಿ. ಐಹೊಳ್ಳಿ ಇದ್ದರು.