

ಬಾಗಲಕೋಟೆ: ಡಿ.16 ರಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಚ್ಡಿಕೆ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಯೊಬ್ಬ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಕುರಿತಾಗದ ವಿಡಿಯೋ ಶೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ರಾಜು ಶೆಲ್ಲಿಕೇರಿ, ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಎಚ್.ಡಿಕೆ ಅವರ ಅಪ್ಪಟ ಅಭಿಮಾನಿಯಾಗಿರುವ ರಾಜು 15 ವರ್ಷಗಳ ಹಿಂದೆ ಎದೆಯ ಮೇಲೆ ಎಚ್ಡಿಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಮಧ್ಯರಾತ್ರಿ 12ಗಂಟೆಗೆ ಎಚ್.ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಲಾಗಿದೆ. ಎದೆಯ ಮೇಲೆ ಹಾಕಿಸಿಕೊಂಡಿದ್ದ ಎಚ್ಡಿಕೆ ಹಚ್ಚೆಗೆ ಎಳೆನೀರು ಅಭಿಷೇಕ ಮಾಡಿ, ಕೇಕ್ ತಿನ್ನಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ರಾಜು ಶೆಲ್ಲಿಕೇರಿ ವಿದ್ಯಾಗಿರಿಯ ಜ್ಯೋತಿ ಕಾಲನಿ ಬಳಿ ಪಾನ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 15 ವರ್ಷಗಳಿಂದ ಎಚ್.ಡಿಕೆ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸ್ತಾ ಬಂದಿರುವ ಅಭಿಮಾನಿ, ಈ ಬಾರಿ ಎದೆಯ ಮೇಲಿನ ಅಚ್ಚೆಗೆ ಎಳೆನೀರು ಅಭಿಷೇಕ, ಸಿಹಿ (ಕೇಕ್) ಹಂಚಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.