ಖ್ಯಾತ ಜನಪದ ಗಾಯಕ, ಸಾಹಿತಿ ಆಲೂರು ನಾಗಪ್ಪ ನಿಧನ

Alur Nagappa
Published on

ಬೆಂಗಳೂರು: ಜಾನಪದ ಹಾಡುಗಾರ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ(74) ಅವರು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪ  ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಹುಟ್ಟೂರು ಬಿಡದಿಯಲ್ಲಿ ಆಲೂರು ನಾಗಪ್ಪ ಅಂತ್ಯಕ್ರಿಯೆ ನಡೆಯಲಿದೆ.

ಜಾನಪದ ಸಂಗೀತದ ಮೇಲಿದ್ದ ಪ್ರೀತಿ ಎಂತಹದ್ದು ಎಂದರೆ ಇವರು ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಿಸೈನ್‌ ಮಾಡಿ ತಮ್ಮ ಆಸಕ್ತಿಗೆ ಒತ್ತು ನೀಡಿದ್ದರು. ಆಲೂರು ನಾಗಪ್ಪ, ಗಾಯಕರಾಗಿ ಮಾತ್ರವಲ್ಲ, ಕನ್ನಡಪರ ಹೋರಾಟಗಾರರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ಮಗಳು ದಿವ್ಯ ಅಲೂಕು ಕೂಡ ನಿರೂಪಕಿ, ಗಾಯಕಿಯಾಗಿದ್ದಾರೆ.

ನಿಂಗವ್ವ ಬೆಂಗಳೂರಿಗೆ ಬಂದು ನೋಡವ್ವ ಹಾಡಿನ ಖ್ಯಾತಿಯ ಆಲೂರು ನಾಗಪ್ಪ ಅವರು ಸಾವಿರಾರು ಲಾವಣಿ, ತತ್ವಪದಗಳ ಹರಿಕಾರಕ.  ಆಲೂರು ನಾಗಪ್ಪ ಅವರು ಯುವಜನತೆ, ಮಹಿಳೆಯರು, ನಾಡುನುಡಿಗೆ ಸಂಬಂಧಿಸಿದ ಎಲ್ಲಾ ರೀತಿಯ ಹಾಡುಗಳನ್ನೂ ಬರೆದಿದ್ದಾರೆ. ಭಕ್ತಿ ಗೀತೆಗಳನ್ನೂ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net