

ಸಿರಿಗೇರಿ: ಮನೆಯವರ ನಿರ್ಬಂಧದ ನಡುವೆಯೇ 1830ರಲ್ಲಿ ಫಾತಿಮಾಶೇಖ್ ಮತ್ತು ಸಾವಿತ್ರಿಬಾಯಿ ಫುಲೆ ಶಿಕ್ಷಣ ಪಡೆದರು ಎಂದು ಪಟ್ಟಣದ ಜಾಮಿಯಾ ಮಸೀದಿ ಸಮಿತಿ ಮಾಜಿ ಅಧ್ಯಕ್ಷ ಎಸ್.ಮುರ್ಷಿದ್ ಅಹ್ಮದ್ ಹೇಳಿದರು.
ಇದನ್ನೂ ಓದಿ: ಸಾವಿತ್ರಿಬಾಯಿ ಫುಲೆ ದೇಶ ಕಂಡ ದಿಟ್ಟ ಮಹಿಳೆ
ಗ್ರಾಮದ ಶಾದಿ ಮಹಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತದ ಪ್ರಥಮ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಹಾಗೂ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಹಿಂಜರಿಯುತ್ತಿದ್ದರು.
ಪ್ರಸ್ತುತ ಕನಿಷ್ಠ ಪದವಿವರೆಗೆ ಓದುವ ಅನಿವಾರ್ಯವಿದೆ. ಜೀವನದ ಕಷ್ಟದ ಸಮಯದಲ್ಲಿ ಮಹಿಳೆಯರು ದುಡಿದು ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣ ಭಂಡಾರಿ ಮಾತನಾಡಿ, ಜ.3 ಮತ್ತು 9 ವಿಶೇಷ ದಿನಗಳಾಗಿವೆ. ದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣದ ದಾರಿ ತೋರಿದ ಇಬ್ಬರು ದಿಟ್ಟ ಮಹಿಳೆಯರು ಈ ದಿನದಂದು ಜನಿಸಿದರು.
ಸಾಮಾಜಿಕ ದಿಗ್ಬಂಧನದ ಕಾಲದಲ್ಲಿ ಶಿಕ್ಷಣ ಪಡೆದು ಎಲ್ಲ ಹೆಣ್ಣು ಮಕ್ಕಳ ಹಾಗೂ ದೀನ ದಲಿತರ ಶಿಕ್ಷಣಕ್ಕಾಗಿ ಜೀವನ ಮುಡಿಪಾಗಿಟ್ಟರು ಎಂದರು.
ಜಾಮಿಯಾ ಮಸೀದಿ ಸಮಿತಿ ಉಪಾಧ್ಯಕ್ಷ ಬಿ.ಅನ್ವರ್ ಬಾಷಾ ಅವರು ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕಗಳನ್ನು ವಿತರಿಸಿದರು.
ಪ್ರಮುಖರಾದ ಕೆ.ದ್ಯಾವಣ್ಣ, ಡೈವರ್ ಹುಲುಗಪ್ಪ, ರಾರಾವಿ ವೆಂಕಟೇಶ, ಬಿ.ಮಹಮ್ಮದ್ ರಫಿಕ್, ವೀರಾಪುರ ಮೌಲಾಸಾಬ್, ಮಿಲ್ಕ್ ಚಾಂದ್ ಬಾಷಾ, ಗ್ರಾಪಂ ಸದಸ್ಯ ಸಲೀಮ್, ಸದ್ದಾಮ್, ಪಿ.ಅಲಿಸಾಬ್, ಲೈಟಿಂಗ್ ಮಾಬುಸಾಬ್, ಮುರ್ತುಜ, ಹುಸೇನ್, ರಜಾಕ್ ಸಾಬ್, ಅಲಿಬಾಷಾ, ಹೊನ್ನೂರ್ ವಲಿ, ಲಾರಿ ಖಾಜಾಸಾಬ್, ನಿಸಾರ್, ಆಯೂಬ್, ಡಿವಿಪಿಯ ಎಚ್.ಉಮೇಶ ಇತರರಿದ್ದರು.