ಕೌಟುಂಬಿಕ ಕಲಹ; ಹಾಡುಹಗಲೇ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ವಕೀಲನ ಹತ್ಯೆ

Hospet Lawyar Murder
1. ಕೊಲೆಯಾದ ತಾರಿಹಳ್ಳಿ ವೆಂಕಟೇಶ. 2. ಕೊಲೆ ಆರೋಪಿ ಮನೋಜ್
Published on

ಹೊಸಪೇಟೆ: ನಗರದ ಸಿವಿಲ್ ಮತ್ತು ಜೆಎಂಎಫ್ ಕೋರ್ಟ್ ಆವರಣದಲ್ಲಿ ಶನಿವಾರ ಹಾಡಹಗಲೇ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಎಂಬುವರನ್ನು ಮಚ್ಚಿನಿಂದ ಕೊಚ್ಚಿ, ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೈದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಕೌಟುಂಬ ಕಲಹ ಕಾರಣ ಎನ್ನಲಾಗಿದ್ದು, ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಕೋರ್ಟ್ ಆವರಣದಲ್ಲಿ ಕುರ್ಚಿ ಮೇಲೆ ಕೂತು ನೋಟರಿ ಮಾಡುವಲ್ಲಿ ವೆಂಕಟೇಶ ನಿರತರಾಗಿದ್ದರು. ಈ ವೇಳೆ ಹಿಂದೆಯಿಂದ ಬಂದ ಅವರ ಸಂಬಂಧಿಯ ಮಗ ಮನೋಜ್ ಎಂಬಾತ ಏಕಾಏಕಿ ಮಚ್ಚಿನಿಂದ ವೆಂಕಟೇಶ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಕೊಚ್ಚಿದ್ದಾನೆ. ಈ ಹೊಡೆತಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟರು.

ಕೊಲೆ ಸುದ್ದಿ ಹಬ್ಬುತ್ತಿದ್ದಂತೆ ನ್ಯಾಯಾಲಯದ ಆವರಣಕ್ಕೆ ನುಗ್ಗುತ್ತಿದ್ದ ಜನರನ್ನು ಪೊಲೀಸರು ಚದುರಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಭೇಟಿದ್ದರು. ‘ಯುವಕನ ಉದ್ಯೋಗ ವಿಷಯಕ್ಕೆ ಸಂಬಂಧಿಸಿ ಸಣ್ಣ ವೈಮನಸ್ಸು ಸೃಷ್ಟಿಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೌಟುಂಬಿಕ ಕಲಹ ಬಿಟ್ಟರೆ ಮತ್ತೇನು ಕಾರಣ ಎಂಬುದು ತನಿಖೆ ಬಳಿಕ ತಿಳಿಯಲಿದೆ’ ಎಂದು ಎಸ್ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net