

ಚಳ್ಳಕೆರೆ: ಕುಟಂಬ ಪ್ರೀತಿ ಮರೆಯಾಗುತ್ತಿರುವ ಸಮಾಜದಲ್ಲಿ ಅನಾಥಾಶ್ರಮಗಳು ಹಿರಿಯರಿಗೆ ಆಧಾರವಾಗುತ್ತಿವೆ ಎಂದು ಡಾ.ಕೆ.ಎಂ.ಜಯಕುಮಾರ್ ಹೇಳಿದರು.
ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ನಗರದ ಬನಶ್ರೀ ವೃದ್ದಾಶ್ರಮದಲ್ಲಿ ರೋಟರಿ ಕ್ಲಬ್ ವತಿಯಿಂದ ವೃದ್ಧರಿಗೆ ಸಿಹಿ ಮತ್ತು ಹೊದಿಕೆ ವಿತರಿಸಿ ಮತನಾಡಿದರು.
ಹಿರಿಯರಿಲ್ಲದ ಕುಟುಂಬಗಳಲ್ಲಿ ಪ್ರೀತಿ-ವಾತ್ಸಲ್ಯ ಮತ್ತು ಸಂಸ್ಕಾರ ಕಾಣಲು ಸಾಧ್ಯವಿಲ್ಲ. ಬದುಕಿನ ಅನುಭವ ಇರುವ ಹಿರಿಯರನ್ನು ಗೌರವಿಸಬೇಕು. ಮಕ್ಕಳಿಗೆ ಮತ್ತು ಸಮಾಜಕ್ಕೆ ಹಿರಿಯರ ಆದರ್ಶವಿರಬೇಕು ಎಂದು ಹೇಳಿದರು.
ಆಶ್ರಮದ ಸಂಸ್ಥಾಪಕಿ ಟಿ.ಮಂಜುಳಾ, ರೋಟರಿ ಕ್ಲಬ್ ಅಧ್ಯಕ್ಷ ಕೆ.ನಾಗೇಶ್, ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ಎಸ್.ಜಯಪ್ರಕಾಶ್, ಡಾ.ನಾಗರಾಜ್, ಸುನೀತಾ ಗೌಡ್ರು ಇದ್ದರು.