ಫೆ.೨೨ ರಿಂದ ೨೬ರವರೆಗೆ ಕೌಟುಂಬಿಕ ಹಾಕಿ ಉತ್ಸವ

253aa55a-d0e6-459e-a6b2-7f0fce9c5c98
Published on

ಮಡಿಕೇರಿ: ವಿ.ಬಾಡಗದ ಹೈ ಫ್ಲೈಯರ್ಸ್‌ ತಂಡದ ಕ್ರೀಡಾ ಸಮಿತಿ ವತಿಯಿಂದ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಫೆ.೨೨ ರಿಂದ ೨೬ರವರೆಗೆ ವಿ.ಬಾಡಗ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯು ವಿರಾಜಪೇಟೆ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಸುಮಾರು ೧೨ ಗ್ರಾಮಗಳ ಕೊಡವ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಮೂರು ನಾಡಿನಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬಗಳು ಮಾತ್ರ ಭಾಗವಹಿಸಬಹುದಾಗಿದ್ದು, ೪ಜನ ಕೊಡವ ಅತಿಥಿ ಆಟಗಾರರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.


ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು. ಆಸಕ್ತ ತಂಡಗಳು ಫೆ.೧೦ರ ಒಳಗಾಗಿ ಪ್ರವೇಶ ಶುಲ್ಕ ರೂ.೧೫೦೦ ಪಾವತಿಸಿ ತಂಡದ ಹೆಸರನ್ನು ನೋಂದಯಿಸಿಕೊಳ್ಳುವಂತೆ ಮನವಿ ಮಾಡಿದರು.


ಪಂದ್ಯಾವಳಿ ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿದ್ದು, ಹಾಕಿ ಕರ್ನಾಟಕ ನಿಯಮಾವಳಿಗೆ ಬದ್ಧವಾಗಿ ಜರುಗಲಿದೆ. ಅಲ್ಲದೆ ವಿವಿಧ ದಾನಿಗಳ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೪೮೧೮೮೩೭೩೮, ೭೦೨೨೩೫೬೪೫೬ ಸಂಪರ್ಕಿಸಬಹುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಕುಪ್ಪಂಡ ದಿಲನ್ ಬೋಪಣ್ಣ, ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಪದಾಧಿಕಾರಿಗಳಾದ ಕಂಜಿತಂಡ ಪೂವಣ್ಣ, ಕೋಲತಂಡ ಸುಬ್ರಮಣಿ, ತೀತಿಮಾಡ ಬೋಪಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net