ಸೌದಿಯಲ್ಲಿ ಬಂಧನದಲ್ಲಿರುವ ಶೈಲೇಶ್ ಕೊಟ್ಟಾರಿ ಬಿಡುಗಡೆಗೆ ಕ್ರಮ ವಹಿಸುವಂತೆ ಕುಟುಂಬದ ಆಗ್ರಹ

IMG-20211111-WA0003
Published on

ಮಂಗಳೂರು: ಫೇಸ್‌ ಬುಕ್ ನಲ್ಲಿ ಸೌದಿ ದೊರೆ ಮತ್ತು ಇಸ್ಲಾಂ ವಿರುದ್ಧ ಪೋಸ್ಟ್‌ ಹಾಕಿದ್ದಾರೆ ಎಂದು ಸುಳ್ಳು ಆರೋಪದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸೌದಿಯಲ್ಲಿ ಬಂಧನನಲ್ಲಿರುವ ಮಂಗಳೂರಿನ ಶೈಲೇಶ್ ಕೊಟ್ಟಾರಿ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.
ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್‌ ಖಾತೆ ತೆರೆದು ಯಾರೋ ಮಾಡಿರುವ ಕೃತ್ಯಕ್ಕೆ ಶೈಲೇಶ್ ಜೈಲು ವಾಸ ಅನುಭವಿಸುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ತಕ್ಷಣ ಮುತುವರ್ಜಿ ವಹಿಸಿ ಶೈಲೇಶ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸೌದಿಯಂತಹ ರಾಷ್ಟ್ರದಲ್ಲಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಇತರ ಸಂಘಟನೆಗಳು ನಿರ್ವಹಿಸುವುದು ಕಷ್ಟ ಎಂದು ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net