

ಚಿಂತಾಮಣಿ: ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಸಾಲ ಕೊಟ್ಟು ವಸೂಲಿಗಾಗಿ ನೀಡುವ ಕಿರುಕುಳಕ್ಕೆ ಬೇಸತ್ತು ಜನರು ಕುಟುಂಬ ಸಮೇತ ಊರು ಬಿಟ್ಟು ಬೇರೆಡೆಗೆ ಪಲಾಯನ ಮಾಡುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರೈತ ಸಂಘದ ರಾಜ್ಯ ಮುಖಂಡ ರಘುನಾಥರೆಡ್ಡಿ ಹೇಳಿದರು.
ಮೈಕ್ರೋ ೈನಾನ್ಸ್‌ಗಳ ವಿರುದ್ಧ ನಗರದಲ್ಲಿ ಸೋಮವಾರ ಮೆರವಣಿಗೆ ನಡೆಸಿದ
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಸುದರ್ಶನ್ ಯಾದವ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಮೈಕ್ರೋ ಫೈನಾನ್ಸ್‌ಗಳು, ಸಾಲ ಕೊಡುವಾಗ ಸಲೀಸಾಗಿ ಕೊಡುತ್ತಾರೆ. ನಂತರ ಬಡ್ಡಿ, ಮೀಟರ್ ಬಡ್ಡಿ ಎಂದು ದುಪ್ಪಟ್ಟು ವಸೂಲಿ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಅದರಲ್ಲೂ ರೈತರು, ಕೂಲಿ ಕೆಲಸ ಮಾಡುವವರು ಮತ್ತು ಮಹಿಳೆಯರನ್ನೇ ಗುರಿ ಮಾಡಲಾಗುತ್ತಿದೆ ಎಂದು ಅರೋಪಿಸಿದರು.
ವಿವಿಧ ಯೋಜನೆಗಳಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ಬಡ ರೈತ ಮತ್ತು ಮಹಿಳೆಯರಿಗೆ ನೀಡುವ ಗೃಹಲಕ್ಷ್ಮೀ, ನರೇಗಾ ಯೋಜನೆ, ಹಾಲಿನ ಬಿಲ್, ವೃದ್ಧಾಪ್ಯವೇತನ ಸೇರಿ ವಿವಿಧ ವೇತನಗಳು ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದ್ದಂತೆ ಆ ಹಣವನ್ನು ಸಾಲಗಳಿಗೆ ಜಮೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸೇರಿ ನೆರೆಯ ಆಂಧ್ರಪ್ರದೇಶದ ಸುಮಾರು 20ಕ್ಕೂ ಹೆಚ್ಚು ಫೈನಾನ್ಸ್ ಕಂಪನಿಗಳು ಸಾಲ ವಸೂಲಿಗೆ ತೀವ್ರ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಊರು ಬಿಟ್ಟರೆ, ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಫೈನಾನ್ಸ್ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಹೀರೇಪಾಳ್ಯ ಕದಿರೇಗೌಡ, ಜಿಲ್ಲಾ ಗೌರವಾಧ್ಯಕ್ಷ ವೆಂಕಟಸುಬ್ಬಾರೆಡ್ಡಿ, ಜಿಲ್ಲಾ ಸಂಚಾಲಕ ಗಂಗುಲಪ್ಪ, ತಾಲೂಕು ಸಂಚಾಲಕ ಆಂಜಪ್ಪ, ರೈತರಾದ ರಮೇಶ್, ಮೋಹನ್ ನಾಗರಾಜ್, ಹುಸೇನ್‌ಸಾಬ್, ವೆಂಕಟರಾಮಯ್ಯ, ವೆಂಕಟೇಶಪ್ಪ, ಯಾಮರೆಡ್ಡಿ, ಕೋನಪ್ಪ, ಶಿವಣ್ಣ, ಲಕ್ಷ್ಮೀಪತಿ, ಕೈವಾರ ರವೀಂದ್ರಗೌಡ, ಯಲ್ಲಪ್ಪ, ನಾರಾಯಣಸ್ವಾಮಿ, ಶಿವಾರೆಡ್ಡಿ, ರಾಮಚಂದ್ರಪ್ಪ, ವೆಂಕಟೇಶಪ್ಪ ಇತರರಿದ್ದರು.