

ಸುಂಟಿಕೊಪ್ಪ:
6 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಲ್ಲಿ ಸಂತ್ರಸ್ತರಾದವರಿಗೆ ಯಶಸ್ವಿಯಾಗಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಜನಪ್ರತಿನಿಧಿಗಳು ಬೆನ್ನುತಟ್ಟಿಕೊಳ್ಳುತ್ತಿದ್ದರೂ ವಾಸ್ತವ ಸ್ಥಿತಿ ಬೇರೆಯೇ ಇದೆ. ಕೆದಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಲೂ ಸುಮಾರು 10 ಕುಟುಂಬಗಳು ಅಪಾಯಕಾರಿ ಪರಿಸ್ಥಿತಿಯಲ್ಲೇ ವಾಸ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಮಳೆ ಜೋರಾಗುತ್ತಿದ್ದಂತೆಯೇ ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖೆಯಿಂದ ನೊಟೀಸ್ ಜಾರಿ ಹೊರತುಪಡಿಸಿದರೆ ಇವರಿಗೆ ಸರ್ಕಾರದಿಂದ ಈತನಕ ಏನೂ ಸಿಕ್ಕಿಲ್ಲ.
2018ರಲ್ಲಿ ಕೊಡಗಿನಲ್ಲಿ ಭೂಕುಸಿತ ಸಂಭವಿಸಿದ ಸಂದರ್ಭ ಮನೆ-ಮಠ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದ್ದ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತ ಏನನ್ನೂ ಮಾಡಿಲ್ಲ ಎನ್ನವುದು ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಡಕೊಲ್ಲಿಯ ಚಾಮುಂಡೇಶ್ವರಿ ಕಾಲೋನಿ ನಿವಾಸಿಗಳ ಆರೋಪ. ಇದೀಗ ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆಯ ಮೂನ್ಸೂಚನೆಯ ಹಿನ್ನೆಲೆಯಲ್ಲಿ ಈ ಕಾಲೋನಿಯಲ್ಲಿ ವಾಸವಿರುವ 56 ಮನೆಗಳ ಪೈಕಿ 9 ಕುಟುಂಬಗಳಿಗೆ ಮನೆಯನ್ನು ತೆರವುಗೊಳಿಸುವಂತೆ ನೊಟೀಸ್ ಕೊಡಲಾಗಿದೆ.
ಮಳೆ ಕಡಿಮೆ ಆಗುವ ತನಕ ಸಂಬAಧಿಕರ ಮನೆ ಅಥವಾ ಬೇರೆಯಲ್ಲಿಯಾದ್ದರೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಕಂದಾಯ ಇಲಾಖೆಯಿಂದ ನೊಟೀಸ್ ಕೊಡಲಾಗಿದೆ. ಕಾಂಡಕೊಲ್ಲಿಯ ಚಾಮುಂಡೇಶ್ವರಿ ಕಾಲೋನಿಯಲ್ಲಿ 56 ಮನೆಗಳಲ್ಲಿ ಸುಮಾರು 248 ಜನ ವಾಸವಾಗಿದ್ದಾರೆ. ಈ ಪೈಕಿ 9 ಮನೆಗಳಲ್ಲಿ 50ಕ್ಕೂ ಹೆಚ್ಚು ಜನರಿದ್ದು, ಇವರೆಲ್ಲರಿಗೂ ಮನೆ ತೆರವುಗೊಳಿಸಲು ಕಂದಾಯ ಇಲಾಖೆ ನೊಟೀಸ್ ಜಾರಿ ಮಾಡಿದೆ. ಆದರೆ ಇಲಾಖೆ ವತಿಯಿಂದ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದಿರುವುದರಿಂದ ಇಲ್ಲಿನ ನಿವಾಸಿಗಳು ದಿಕ್ಕುತೊಚದಂತಾಗಿದ್ದಾರೆ.
ಸಂಬAಧಿಕರ ಮನೆ ಅಥವಾ ಸ್ನೇಹಿತರ ಮನೆಯಲ್ಲಿ 1-2 ದಿನದ ಮಟ್ಟಿಗೆ ತಂಗಬಹುದು. ಆದರೆ 1-2 ತಿಂಗಳು ಮಳೆಯ ವಾತಾವರಣ ಇರುವುದರಿಂದ ಅಷ್ಟು ದಿನಗಳ ಕಾಲ ಯಾವ ಸಂಬAಧಿಕರು ಅಥವಾ ಸ್ನೇಹಿತರು ಇರಿಸಿಕೊಳ್ಳುತ್ತಾರೆ ಎನ್ನುವು ಪ್ರಶ್ನೆ ಇವರದ್ದು. ಎಲ್ಲರೂ ಅಂದದAದಿನ ಬದುಕಿಗೆ ಅಂದAದೇ ದುಡಿಯುವ ಕೂಲಿ ಕಾರ್ಮಿಕರಾಗಿದ್ದು, ಸರ್ಕಾರÀವೇ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎನ್ನುವ ಬೇಡಿಕೆಯಲ್ಲಿ ಇಲ್ಲಿನವರು ಇಟ್ಟಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ದುಪ್ಪಟ್ಟು ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಭೂಕುಸಿತ, ಪ್ರವಾಹ, ಅಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ರಾಜ್ಯದ ಮುಖ್ಯ ಮಂತ್ರಿಗಳಿAದ ಹಿಡಿದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲೆಗೆ ಭೇಟಿ ನೀಡಿದ್ದು, ಪರಿಹಾರ ಮತ್ತು ಮುಜಾಗ್ರತಾÀ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಂಸತ್ ಸದಸ್ಯರು ಹಾಗೂ ಹಾಲಿ ಮಾಜಿ ಸದಸ್ಯರುಗಳು ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಈಗಾಗಲೇ ವರದಿಯಾಗಿರುವಂತೆ ಜಿಲ್ಲಾಧಿಕಾರಿಗಳು ವಿಡಿಯೋ ಸಂವಾದದ ಮೂಲಕ ತಾಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದ ಮೇರೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಧಿಕಾರಿಗಳ ತಂಡಗಳಿAದ ಮಾಹಿತಿ ಪಡೆದುಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2018ರಲ್ಲಿ ಸಂಭವಿಸಿದ ಭೂಕುಸಿತಗೊಂಡಿದ್ದ ಪ್ರದೇಶಗಳಲ್ಲಿ ನೆಲೆಸಿರುವ ಮಂದಿಗೆ ಈ ತಿಂಗಳಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದ್ದು ಕಾಂಡನಕೊಲ್ಲಿ, ಕೊಪ್ಪತ್ತೂರು, ಪಾಪ್ಪಳಿಕಾಡು, ಹಾಲೇರಿ, ಕೆದಕಲ್ ಭಾಗದ ನೆಲೆಸಿರುವ ಅಪಾಯದ ಮೂನ್ಸೂಚನೆಯಲ್ಲಿರುವ ಜನರಿಗೂ ಸುರಕ್ಷಿತ ಪ್ರದೇಶಗಳಿಗೆ ಅಥವಾ ಸಂಬAಧಿಕರ ಮನೆಗಳಿಗೆ ಹೋಗಿ ನೆಲೆಸುವಂತೆ ಸೂಚನೆ ಹೋಗಿದೆ.
ಈ ಕಾಲೋನಿಯಲ್ಲಿ ಕಳೆದ 40 ವರ್ಷಗಳಿಗೂ ಮಿಕ್ಕಿ ನಮ್ಮ ಪೋಷಕರು ಆಗಮಿಸಿ ನೆಲೆಸಿದ್ದಾರೆ ಆದರೆ ನಮಗೆ ಇರುವ ಸೂರಿನಲ್ಲಿಯೇ ನೆಲೆಸಬೇಕೇನ್ನುವ ಆಸೆಯನ್ನು ಹೊಂದಿದ್ದೇವೆ. ನಾವು ಕೂಲಿ ಕಾರ್ಮಿಕರಾಗಿದ್ದೇವೆ ಸರ್ಕಾರದ ಸೂಚನೆಯಂತೆ ಏಕಾಏಕಿ ಮನೆ ಬಿಟ್ಟು ಬೇರೆ ಕಡೆ ನೆಲೆಸುವುದು ಮತ್ತು ದುಡಿಮೆಯನ್ನು ಕಂಡುಕೊಳ್ಳುವುದು ತುಂಬಾ ಕಷ್ಟಕರ. ನಮಗೆ ರ‍್ಯಾಯ ವ್ಯವಸ್ಥೆಯನ್ನುಗೊಳಿಸದೆ ಸಂಬAಧಿಕರ ಬಂದು ಬಳಗದವರಲ್ಲಿ ಆಶ್ರಯ ಪಡೆದುಕೊಳ್ಳಲು ತಿಳಿಸಿದ್ದಾರೆ. ಆದರೆ ನಮ್ಮನ್ನು ಕಾಳಜಿ ಕೇಂದ್ರಗಳಿಗೆ ಕಳಿಸದೆ ಏಕಾಏಕಿ ಇಂತಿಷ್ಟು ಕಾಲಾವಕಾಶ ನಿಗದಿಗೊಳಿಸದೆ ತೆರಳುವಂತೆ ಸೂಚಿಸಿರುವುದು ಸೊಜಿಗದ ವಿಚಾರವಾಗಿದೆ. ಜಿಲ್ಲಾಡಳಿತ ನೋಟಿಸು ನೀಡುವುದಕ್ಕೂ ಮುಂಚೆ ಕಾಳಜಿ ಕೇಂದ್ರವನ್ನು ತೆರೆದರೆ ಉಳಿದುಕೊಳ್ಳಲು ಸಾಧ್ಯವಾಗುತ್ತಿತ್ತು ಎನ್ನುವುದು ಸಂತ್ರಸ್ತರ ಅಭಿಪ್ರಾಯ.
ಈ ಭಾಗದಲ್ಲಿ ಅಂದಾಜು 300 ಕ್ಕೂ ಮಿಕ್ಕಿ ಸಂಖ್ಯೆ ಇದೆ. ಈ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಾಂಗದವರೇ ಬಹುಪಾಲು ಜನರು ವಾಸ ಮಾಡುತ್ತಿದ್ದಾರೆ. ಆದರೂ ಈ ಗ್ರಾಮಕ್ಕೆ ಮೂಲಸೌಕರ್ಯದ ಕೊರತೆಯಿದ್ದು, ಸಂಕಷ್ಟದಿAದ ಬದುಕು ಸಾಗಿಸುತ್ತಿದ್ದೇವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ನಾವು ಈಗ ಇರುವ ಸ್ಥಳದಲ್ಲೇ ನೆಲೆಸಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇವೆ. ಇಲ್ಲಿ ಬಹುತೇಕರು ಕೂಲಿ ಕಾರ್ಮಿಕರೇ ವಾಸವಾಗಿದ್ದು, ಸರ್ಕಾರದ ಸೂಚನೆಯಂತೆ ಏಕಾಏಕಿ ಮನೆ ಬಿಟ್ಟು ಬೇರೆ ಕಡೆ ನೆಲೆಸುವುದು ಕಷ್ಟದ ಕೆಲಸ. ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
ಚಂದ್ರಶೇಖರ್, ಕಾಂಡನಕೊಲ್ಲಿ ಚಾಮುಂಡೇಶ್ವರಿ ಕಾಲೋನಿ ನಿವಾಸಿ
2018ರಲ್ಲಿ ನಾವುಗಳು ಗ್ರಾಮಕ್ಕೆ ಗ್ರಾಮವೇ ದಿಗ್ಬಂಧನಕ್ಕೀಡಾಗಿದ್ದು, ನಮ್ಮ ಸುತ್ತ ಮುತ್ತಲಿನಲ್ಲಿ ಸಂಭವಿಸಿದ ಭೀಕರ ಮೇಘಾ ಸ್ಫೋಟದಿಂದ ನಷ್ಟಕ್ಕೆ ಈಡಾದ ನಂತರ ನಮ್ಮಲ್ಲಿ ಇಂದಿನವರೆಗೂ ಮೂಲ ಸವಲತ್ತು ದೊರೆತಿಲ್ಲ. ನಮ್ಮಗೆ ಗ್ರಾಮ ಪಂಚಾಯಿತಿಗೆ ತೆರಳಬೇಕಾದರೆ 10 ಕಿ.ಮೀ.ದೂರ, ಮಾದಾಪುರ
ಆರೋಗ್ಯ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಅಲ್ಲಿಗೆ ತೆರಳಬೇಕಾದರೆ 11.ಕಿ.ಮಿ ದೂರ ಕ್ರಮಿಸಿ ತೆರಳಬೇಕಾಗಿದೆ.
ರವಿ, ಕಾಂಡನಕೊಲ್ಲಿ ಚಾಮುಂಡೇಶ್ವರಿ ಕಾಲೋನಿ ನಿವಾಸಿ
ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 2018 ರಲ್ಲಿ ಸಂಭವಿಸಿದ ಮೇಘಾಸ್ಪೋಟ, ಭೂಕುಸಿತದಿಂದಾಗಿ ಈ ಭಾಗದ ಜನತೆಯು ತೀವ್ರ ಸಂಕಷ್ಟವನ್ನು ಎದುರಿಸಿದ್ದು, ಮುಜಾಗ್ರತಾ ಕ್ರಮವಾಗಿ ಅಪಾಯದ ಅಂಚಿನಲ್ಲಿರುವ ಮನೆಯ ನಿವಾಸಿಗಳಿಗೆ ಸುರಕ್ಷತೆಯ ದಿಸೆಯಲ್ಲಿ ಅವರಿಗೆ ನೊಟೀಸ್ ಮೂಲಕ ಮಾಹಿತಿ ನೀಡಲಾಗಿದ್ದು, ತಾತ್ಕಾಲಿಕವಾಗಿ ಮನೆಗಳನ್ನು ತೊರೆದು ಸಂಬAಧಿಕರ ಮನೆಯಲ್ಲಿ ಆಶ್ರಯಕ್ಕೆ ಸೂಚಿಸಲಾಗಿದೆ ಅವರಿಗೆ ತೆರಳಲು ಕಷ್ಟವೆಂದು ಕಂಡು ಬಂದಲ್ಲಿ ಇಲಾಖೆಯ ವತಿಯಿಂದ ಸುರಕ್ಷಿತ ಸ್ಥಳಗಳಲ್ಲಿ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿಕೊಡಗಲಾವುದು.
ಪ್ರಶಾಂತ್, ಉಪತಹಸೀಲ್ದಾರ್, ಸುಂಟಿಕೊಪ್ಪ