ಪುತ್ತೂರು: ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಬಂಧಿಸಿ ಶ್ರೀಕೃಷ್ಣ ಜೆ. ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರದಲ್ಲಿ ವಾದವನ್ನು ಆಲಿಸಿದ ಮಂಗಳೂರು ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಂತಿಮ ತೀರ್ಪನ್ನು ಜುಲೈ ೨೫ಕ್ಕೆ ಕಾಯ್ದಿರಿಸಿದೆ. ಶನಿವಾರ ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರು ತಲಾ ಮೂರು ಪ್ರಮುಖ ಕಾನೂನು ಉಲ್ಲೇಖಗಳೊಂದಿಗೆ ಲಿಖಿತ ವಾದಾಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.