ಉದ್ಘಾಟನೆಗೂ ಮುಂಚೆಯೇ ಕಿತ್ತು ಬಿದ್ದ ಫಾಲ್ಸ್‌ ಸೀಲಿಂಗ್‌

30KWR2
Published on

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ಹೊಸ ಕಟ್ಟಡದ ಎರಡನೇ ಮಹಡಿಯ ಒಂದು ವಿಭಾಗದ ಫಾಲ್ಸ್ ಸೀಲಿಂಗ್ ಸೋಮವಾರ ಕುಸಿದು ಬಿದ್ದಿದೆ.

160 ಕೋಟಿ ರೂ. ವೆಚ್ಚದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ರೋಗಿಗಳ ಅನುಕೂಲಕ್ಕಾಗಿ ಅಲ್ಲಿ ವಿವಿಧ ವಿಭಾಗಗಳನ್ನು 15 ದಿನಗಳ ಹಿಂದಷ್ಟೇ ಬಳಕೆಗೆ ತೆರೆಯಲಾಗಿದೆ. 2 ನೇ ಮಹಡಿಯ ವಿದ್ಯುತ್ ಕೊಠಡಿಯ ಫಾಲಸ್ ಸೀಲಿಂಗ್ ಸೋಮವಾರ ಬೆಳಗ್ಗೆ ಕುಸಿದು ಬಿದ್ದಿದೆ. ಆದರೆ, ಆ ವಿಭಾಗದಲ್ಲಿ ಯಾವುದೇ ಬಳಕೆ ಇರಲಿಲ್ಲ. ಜನರ ಓಡಾಟ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಅವರ ದೂರಿನ ಮೇರೆಗೆ ತಹಸೀಲ್ದಾರ್ ನಿಶ್ಚಲ ನರೋನಾ ಸ್ಥಳಕ್ಕೆ ಭೇಟಿ ನೀಡಿದರು. ಲೋಕೋಪಯೋಗಿ ಅಽಕಾರಿಗಳನ್ನು ಕರೆಸಿ ವರದಿ ನೀಡುವಂತೆ ಅವರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net