ಮರ ಬಿದ್ದು ಕಾರು, ಮನೆಗೆ ಹಾನಿ

male haani
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯೊಂದಿಗೆ ರಭಸವಾಗಿ ಗಾಳಿ ಕೂಡ ಬೀಸುತ್ತಿದ್ದು, ಭಾರಿ ಗಾಳಿಗೆ ಮನೆ ಮೇಲೆ ಮರ ಬಿದ್ದು ಕಾರು, ಮನೆಗೆ ಹಾನಿಯಾದ ಘಟನೆ ಮಡಿಕೇರಿ ಹೊರ ವಲಯದ ದೇವಸ್ತೂರು ಎಂಬಲ್ಲಿ ಬುಧವಾರ ನಡೆದಿದೆ.

ದೇವಸ್ತೂರು ಗ್ರಾಮದ ಕುಕ್ಕೇರ ಚಿಮ್ಮ ಎಂಬುವವರ ಮನೆ ಮೇಲೆ ಮನೆಯ ಪಕ್ಕದಲ್ಲಿದ್ದ ಒಣಗಿದ ಗೋಳಿ ಮರ ಬಿದ್ದ ಪರಿಣಾಮ, ಮನೆಯ ಮುಂಬಾದ ನಿಲ್ಲಿಸಿದ ಕಾರು ಜಖಂಗೊಂಡಿದೆ. ಶೀಟ್‌ಗಳು ಸಂಪೂರ್ಣವಾಗಿ ಪುಡಿಪುಡಿಯಾಗಿದೆ. ಇದರ ಜೊತೆಗೆ ಮನೆಯ ಮೇಲ್ಬಾಗಕ್ಕೆ ಮರ ಬಿದ್ದ ಹಿನ್ನಲೆ ಮನೆಗೂ ಹಾನಿಯಾಗಿದೆ.

ಸ್ಥಳಕ್ಕೆ ಮಡಿಕೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net