ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ

IMG-20240722-WA0217 (1)
Published on

ಆಲೂರು: ಪಟ್ಟಣದ ಬಿಕ್ಕೋಡು ರಸ್ತೆಯ ಬಳಿಯ ವಿದ್ಯುತ್ ಕಂಬವೊಂದು ಬೀಳುವ ಹಂತದಲ್ಲಿದ್ದು, ಈ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಿದ್ದ ಸೆಸ್ಕ್ ನಿರ್ಲಕ್ಷೃ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕೊನೇ ಪೇಟೆಯ ಮಸೀದಿಯ ಬಳಿ ಕಳೆದ ಕೆಲವು ತಿಂಗಳಿಂದ ವಿದ್ಯುತ್ ಕಂಬವೊಂದು ಬೀಳುವ ಹಂತದಲ್ಲಿದೆ. ಸಿಮೆಂಟ್ ಕಟ್ಟೆಯೊಂದಕ್ಕೆ ತಾಗಿ ನಿಂತಿರುವ ಈ ವಿದ್ಯುತ್ ಕಂಬ ಜೋರಾಗಿ ಗಾಳಿ ಬೀಸಿದರೆ ನೆಲಕ್ಕೆ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಕಂಬವನ್ನು ಬದಲಾವಣೆ ಮಾಡುವಂತೆ ಹಲವಾರು ಬಾರಿ ಸೆಸ್ಕ್ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ದೂರುತ್ತಾರೆ.
ಈ ಕುರಿತು ಹಿರಿಯ ಅಧಿಕಾರಿಗಳು ಗಮನಹರಿಸಿ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬವನ್ನು ಕೂಡಲೇ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊನೇ ಪೇಟೆಯಲ್ಲಿ ಅಂಗಡಿ, ವಾಸದ ಮನೆಗಳಿದ್ದು ವಿದ್ಯುತ್ ಕಂಬ ಬಿದ್ದರೆ ಜೀವಹಾನಿಯಾಗುವ ಸಂಭವಗಳಿವೆ. ಹಾಗಾಗಿ ಜನರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಕಂಬವನ್ನು ಬದಲಾವಣೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಪಟ್ಟಣದ ಬಿಕ್ಕೋಡು ರಸ್ತೆಯು ಬೇಲೂರು, ಸಕಲೇಶಪುರ, ಹಾಸನಕ್ಕೆ ಸಂಪರ್ಕ ಕಲ್ಪಿಸುವುದರಿಂದ ವೃತ್ತ ನಿರ್ಮಾಣ ಮಾಡಲು ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ್ ಆಲೂರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net