ಬುಡ ಸಮೇತ ಉರುಳಿದ ಮರ, ವಾಸದ ಮನೆಗೆ ಅಪಾಯ

28ss2mane talahadi
ಭಾರಿ ಗಾಳಿ ಮಳೆಗೆ ಕೂಡ್ಲೂರು ಗ್ರಾಮದ ಅನಂತ್‌ರಾಜ್ ಅವರ ವಾಸದ ಮನೆ ಬಳಿ ಮರ ಬುಡಸಮೇತ ಗದ್ದೆಗೆ ಬಿದ್ದ ಹಿನ್ನೆಲೆಯಲ್ಲಿ ಮಣ್ಣು ಕುಸಿದಿರುವುದು.
Published on

ಶನಿವಾರಸಂತೆ: ಭಾರಿ ಗಾಳಿ ಮಳೆಗೆ ವಾಸದ ಮನೆ ಬಳಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಗದ್ದೆಗೆ ಬಿದ್ದ ಪರಿಣಾಮ ವಾಸದ ಮನೆಗೂ ಅಪಾಯ ತಂದೊಡ್ಡಿದೆ.

ಬೆಸೂರು ಕೂಡ್ಲೂರು ಗ್ರಾಮದ ನಿವಾಸಿ ಅನಂತರಾಜು ಅವರ ಮನೆಯ ಬಳಿ ಬೆಳೆದಿದ್ದ ಭಾರಿ ಗಾತ್ರದ ಮರ ಬುಡ ಸಮೇತವಾಗಿ ಮನೆಯ ಕೆಳ ಭಾಗದಲ್ಲಿರುವ ನಾಟಿ ಮಾಡಿದ ಗದ್ದೆಯ ಮೇಲೆ ಬಿದ್ದಿದೆ. ಮರ ಬುಡ ಸಮೇತವಾಗಿ ಬಿದ್ದ ಪರಿಣಾಮ ಅನಂತ್‌ರಾಜು ಅವರ ವಾಸದ ಮನೆ ಬುಡದವರೆಗೂ ಮಣ್ಣು ಕುಸಿದಿದ್ದು, ಗಾಳಿ ಮಳೆ ಜಾಸ್ತಿಯಾದಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಎದುರಾಗಿದೆ. ಒಂದು ವೇಳೆ ಮಣ್ಣು ಕುಸಿಯುತ್ತಾ ಬಂದರೆ ಇಡೀ ಮನೆ ಕುಸಿಯುವ ಸಾಧ್ಯತೆ ಇದೆ. ಈ ಕುರಿತು ಮನೆ ಮಾಲೀಕ ಅನಂತ್‌ರಾಜ್ ಸಂಬಂಧ ಪಟ್ಟ ಕೊಡ್ಲಿಪೇಟೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net