ಪಾಳುಬಾವಿಗೆ ಬಿದ್ದ ಈರುಳ್ಳಿ ಲಾರಿ, ಚಾಲಕ-ಕ್ಲಿನರ್ ಪ್ರಾಣಾಪಾಯದಿಂದ ಪಾರು

Khanahosalli Onion Truck Falldown
Published on

ಕಾನಹೊಸಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಸಂಜೆ ಈರುಳ್ಳಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪಾಳುಬಾವಿಗೆ ಬಿದ್ದಿದೆ. ಮಹಾರಾಷ್ಟ್ರದಿಂದ ರಾಷ್ಟ್ರೀಯ ಹೆದ್ದಾರಿ 50ರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಬಾವಿಗೆ ಉರುಳಿದೆ.

ತಪ್ಪಿದ ಅನಾಹುತ: ಲಾರಿ ಡಿಕ್ಕಿ ಹೊಡೆದಿದ್ದರಿಂದ ವಿದ್ಯುತ್ ಕಂಬ ಮುರಿದು 11 ಕೆವಿ ತಂತಿ ತುಂಡಾಗಿದೆ. ಆದರೆ ತಂತಿ ಲಾರಿಗೆ ತಾಕದಿರುವುದರಿಂದ ಚಾಲಕ ಮತ್ತು ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಶಿವಕುಮಾರ್, ಕೊಟ್ಟೂರು ವೃತ್ತ ಸಿಪಿಐ ರವೀಂದ್ರ ಕುರುಬಗಟ್ಟಿ, ಕಾನಹೊಸಹಳ್ಳಿ ಪಿಎಸ್‌ಐ ಎಚ್.ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net