ಚ್ಯುತಿ ಬಾರದಂತೆ ಕಾರ್ಯನಿರ್ವಹಣೆ

30Huk1
Published on

ಹುಕ್ಕೇರಿ: ನನ್ನನ್ನು ಬೆಂಬಲಿಸಿ ಮತ ನೀಡಿದ ಜನರ ನಿರೀಕ್ಷೆಗೆ ಚ್ಯುತಿ ಬಾರದಂತೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಆದ ಮಹಾವೀರ ನಿಲಜಗಿ ಹೇಳಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು,ಹಿತೈಷಿಗಳು ಪಟ್ಟಣದ ಅವರ ಗೃಹ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ನಮ್ಮ ತಂದೆ ಸ್ಥಾಪಿಸಿದ ಹಲವಾರು ಸಂಘ ಸಂಸ್ಥೆಗಳ ಮೂಲಕ ಬಡವರು, ಮಧ್ಯಮ ವರ್ಗದವರಿಗೆ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಗುರುತಿಸಿ 2 ದಶಕಗಳಿಂದ ಪುರಸಭೆ ಸದಸ್ಯನಾಗಿ ಆಯ್ಕೆ ಮಾಡುತ್ತಿದ್ದಾರೆ. ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಗೆ ಜನ ಯಾವಾಗಲೂ ಬೆಂಬಲಿಸುತ್ತಾರೆ. ನೆಚ್ಚಿನ ನಾಯಕರಾದ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಮತ್ತು ಶಾಸಕ ನಿಖಿಲ ಕತ್ತಿ ತಾಲೂಕುಮಟ್ಟದ ಸಹಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದು, ಅವಕಾಶ ಸದ್ಬಳಕೆ ಮಾಡಿಕೊಳ್ಳುವೆ ಎಂದರು.

ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸಂಜಯ ನಿಲಜಗಿ ಮಾತನಾಡಿದರು.

ಪತ್ರಕರ್ತರಾದ ಪಿ.ಜಿ.ಕೊಣ್ಣೂರ, ಬಾಬು ಸುಂಕದ, ಸಂಜೀವ ಮುತಾಲಿಕ, ಬಸವರಾಜ ಕೊಂಡಿ, ಡಾ.ಸೋಹನ ವಾಗೋಜಿ, ಗುತ್ತಿಗೆದಾರ ರಾಜು ಪಾಟೀಲ, ಶೀತಲ ಸೊಲ್ಲಾಪೂರೆ, ರೋಹನ ಬಸ್ತವಾಡ, ಬಸವರಾಜ ಹೊನ್ನಮನಿ, ಸಂಜಯ ಖತಗಲ್ಲಿ, ಅನಿಲ ನಾಯಿಕ, ರಾಜೇಶ ಕುಲಕರ್ಣಿ, ಸಂಜೀವ ಬಿಸಿರೊಟ್ಟಿ, ಡಾ.ಮಹೇಶ ಸಬನೀಸ್, ಸುರೇಶ ಗಡ್ಡನ್ನವರ, ಸಮಿತ ಚೌಗಲಾ, ಪವನ ಮನಗೂಳಿ, ರಮೇಶ ಕನಮಡಿ, ಸುರೇಶ ಬೆಡಕಿಹಾಳ, ಬಾಹುಬಲಿ ಕದಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net