

ಹಾವೇರಿ: ಬೈಕ್ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ತಿಮ್ಮೇನಹಳ್ಳಿ ಕ್ರಾಸ್ ಬಳಿ ಭಾನುವಾರ ನಡೆದಿದೆ.
ನಗರದ ಕೊರಗರ ಓಣಿಯ ನಿವಾಸಿ ದೇವರಾಜ ಶಾಂತಪ್ಪ ಭಜಂತ್ರಿ (23) ಮೃತ ಯುವಕ.
ಈತ ಬೈಕ್ ಮೇಲೆ ಹಾವೇರಿಯಿಂದ ಗುತ್ತಲಕ್ಕೆ ತೆರಳುತ್ತಿದ್ದ ಸಮಯದಲ್ಲಿ ತಿಮ್ಮೇನಹಳ್ಳಿ ಕ್ರಾಸ್ ಬಳಿ ಬೈಕ್ ಬ್ಯಾಲೆನ್ಸ್ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.