ಮೆಕ್ಕೆಜೋಳಕ್ಕೆ ಫಾಲ್ ಆರ್ಮಿ ವರ್ಮ ಕೀಟಬಾಧೆ

Fall armyworm pest of maize
ಇಂಡಿಯ ನೀಲಪ್ಪ ಗುಡ್ಲ ಇವರ ಹೊಲದಲ್ಲಿರುವ ಮೆಕ್ಕೆಜೋಳವು ಫಾಲ್ ಆರ್ಮಿ ವರ್ಮ ಕೀಟಬಾಧೆಗೆ ಒಳಗಾಗಿರುವುದು.
Published on

ಇಂಡಿ: ಮಳೆಯಿಲ್ಲದೆ ಕಂಗಾಲಾಗಿರುವ ಮೆಕ್ಕೆಜೋಳ ಬೆಳೆಗಾರರಿಗೆ ಫಾಲ್ ಆರ್ಮಿ ವರ್ಮ ಕೀಟಬಾಧೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲೂಕಿನಲ್ಲಿ ಶೇ. 70ರಷ್ಟು ಮಳೆ ಕೊರತೆ ಮಧ್ಯೆಯೂ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳಕ್ಕೆ ಫಾಲ್ ಆರ್ಮಿ ವರ್ಮ ಬೆಳೆಯ ಸುಳಿಯಲ್ಲಿ ಕಂಡು ಬರುತ್ತಿದ್ದು ಎಕರೆಗಟ್ಟಲೆ ಹೊಲದಲ್ಲಿನ ಮೆಕ್ಕೆಜೋಳಕ್ಕೆ ತೊಂದರೆ ಮಾಡುತ್ತಿದೆ. ಮೇಲಿನಿಂದ ನೋಡಿದರೆ ಬೆಳೆ ಚೆನ್ನಾಗಿ ಕಂಡರೂ ಎಲೆ ತೆಗೆದು ನೋಡಿದರೆ ಸುಳಿಯಲ್ಲಿ ಕೀಟಬಾಧೆ ಕಾಣುತ್ತಿದೆ. ತಾಲೂಕಿನ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಈ ರೋಗ ಅನೇಕ ಹೊಲಗಳಲ್ಲಿ ಕಂಡುಬಂದಿದೆ. ಇದರಿಂದ ಇಳುವರಿ ಕಡಿಮೆ ಆಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ ಇಮಾಮೆಕ್ಟಿನ್ ಬೆಂಝೋಯೇಟ್ ಎಂಬ ಸಸ್ಯ ಸಂರಕ್ಷಣಾ 2ಗ್ರಾಂ ನೀರಿನಲ್ಲಿ ಬೆರೆಸಿ ಸುಳಿಯಲ್ಲಿ ಸಿಂಪರಣೆ ಮಾಡಿದರೆ ಯಶಸ್ವಿಯಾಗಿ ನಿಯಂತ್ರಿಸಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಏವೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net