

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನಮ್ಮ ಜೀವನ ಸಾರ್ಥಕವಾಗಬೇಕಾದರೆ ಧರ್ಮದ ಅವಶ್ಯಕತೆ ಇದೆ. ಶ್ರದ್ಧೆ, ಭಕ್ತಿ, ನಂಬಿಕೆ ಇಲ್ಲದ ಪೂಜೆ ಫಲ ನೀಡುವುದಿಲ್ಲ ಎಂದು ಉಪನ್ಯಾಸಕಿ ಚೇತನಾ ರಾಜೇಂದ್ರ ಹೆಗ್ಡೆ ಪುತ್ತಿಗೆ ಹೇಳಿದರು.
ಇರುವೈಲು ದೇವಸ್ಥಾನ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಂಗಳವಾರ ನಡೆದ ಇರುವೈಲು ಫಲ್ಗುಣಿ ಯುವಕ ಮಂಡಲದ 37ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪ್ರಕಾಶ್ ನಾಯ್ಕ ಶಿರ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಇರುವೈಲಿನ ಹಿರಿಯ ಯಕ್ಷಗಾನ ಕಲಾವಿದ, ದೈವ ಪರಿಚಾರಕ ಸಂಜೀವ ಭಂಡಾರಿ ಮತ್ತು ಮಲ್ಪೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮಾನಂದ ಅವರನ್ನು ಸನ್ಮಾನಿಸಲಾಯಿತು.
ದಿನೇಶ್ ಪೂಜಾರಿ ಕಟ್ಟಣಿಗೆ, ಯುವಕ ಮಂಡಲ ಅಧ್ಯಕ್ಷ ಲಕ್ಷ್ಮೀಶ ನಾಯ್ಕ ಉಪಸ್ಥಿತರಿದ್ದರು. ಧನಂಜಯ ಶೆಟ್ಟಿ ಬರ್ಕೆ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ ವರದಿ ವಾಚಿಸಿದರು. ಮನೋಹರ್ ನಾಯ್ಕ, ಸಂದೇಶ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪ್ರಶಾಂತ್ ಸಫಲಿಗ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಹಿರಿಯ ಸದಸ್ಯ ಪ್ರಸಾದ್ ಶೆಟ್ಟಿ ಬೊಂಡಾಲ ನಿರೂಪಿಸಿದರು. ಶುಭಕರ ಸಾಲ್ಯಾನ್‌ವಂದಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಹೊಸಬೆಟ್ಟು ಶಾಲೆಯ ವಿದ್ಯಾರ್ಥಿಗಲಾದ ಪವನ್, ಸಾನಿಧ್ಯ, ಸಾನ್ವಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು, 8ರಿಂದ 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.