

ಆನೇಕಲ್: ಇತ್ತೀಚೆಗೆ ಅಂತರ್ಜಾಲದಲ್ಲಿ ಫೇಕ್ ವೆಬ್ಸೈಟ್ ಸೃಷ್ಟಿಸಿ ವಂಚನೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ವಂಚಕರು ಬನ್ನೇರುಟ್ಟ ಜೈವಿಕ ಉದ್ಯಾನವನ ವೆಬ್ಸೈಟ್ ಕೂಡ ಫೇಕ್ ಮಾಡಿ ಸಾರ್ವಜನಿಕರಿಗೆ ವಂಚಿಸಿಲು ಯತ್ನಿಸಿದ್ದಾರೆ.
ವೆಬ್ಸೈಟ್ ಸರ್ಚ್ ಮಾಡಲು ಹೋಗಿ ಸ್ವತ@ ಪಾರ್ಕ್ನ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರೇ (ಇಡಿ) ಹಣ ಕಳೆದು ಕೊಂಡಿದ್ದಾರೆ.
ಆನೇಕಲ್ ತಾಲೂಕಿನ ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೂ ವಂಚಕರ ಬಿಸಿ ತಟ್ಟಿದೆ, ಬನ್ನೇರುಟ್ಟ ಜೈವಿಕ ಉದ್ಯಾನವನದ ವೆಬ್ಸೈಟ್ ಫೇಕ್ ಮಾಡಿ ಎನ್ನುವ ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ ಮೂಲಕ ಪ್ರವಾಸಿಗರ ಬಳಿ ಹಣ ಪೀಕಲು ಮುಂದಾಗಿದ್ದಾರೆ, ಬನ್ನೇರುಟ್ಟದ ಜೂ, ಸಾರಿ, ಚಿಟ್ಟೆ ಪಾರ್ಕ್ಗೆ ಟಿಕೆಟ್ ಬುಕಿಂಗ್ ಬಹಳಷ್ಟು ಮಂದಿ ಆನ್ಲೈನ್ನಲ್ಲಿ ಮಾಡುತ್ತಾರೆ, ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಬನ್ನೇರುಟ್ಟ ನ್ಯಾಷನಲ್ ಪಾರ್ಕ್ ಫೇಕ್ ವೆಬ್ಸೈಟ್ ಸೃಷ್ಟಿಸಿ ಹಲವು ಮಂದಿಗೆ ಟಿಕೆಟ್ ಬುಕಿಂಗ್ ಹೆಸರಿನಲ್ಲಿ ಟೋಪಿ ಹಾಕಲು ಮುಂದಾಗಿದ್ದು, ಎಚ್ಚೆತ್ತ ಪಾರ್ಕ್ ಇಡಿ ಸೂರ್ಯಸೇನ್ ವಂಚಕರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾರ್ಕಿನ ಹಣದ ವ್ಯವಹಾರ ಶೇ.80 ಆನ್ಲೈನ್ನಲ್ಲಿ ನಡೆಯುತ್ತಿದೆ. ಹೀಗಿರುವಾಗ ಗೂಗಲ್ ಸರ್ಚ್ ಇಂಜಿನ್ ಆಪ್ಟಿಮೈಜ್ನಲ್ಲಿ ಸರ್ಚ್ ಮಾಡಿದಾಗ ಚಿಚ್ಞ್ಎನ್ನುವ ವೆಬ್ಸೈಟ್ ಕಣ್ಣಿಗೆ ಬಿತ್ತು. ಆದರೆ ನಮ್ಮ ವೆಬ್ ಸೈಟ್
ಆಗಿದ್ದು, ಈ ಎರಡಕ್ಕೂ ವ್ಯಾತ್ಯಾಸ ಇದೆ ಎಂದು ಕುತೂಹಲದಿಂದ ಅದರ ಒಳ ಹೊಕ್ಕಿ ಸರ್ಚ್ ಮಾಡಿದಾಗ ಅದರಲ್ಲಿ ನಮ್ಮದೆ ಆದ ಎಲ್ಲ ಮಾಹಿತಿ ಮತ್ತು ಸಫಾರಿ ಬುಕ್ ಮಾಡುವ ರೇಜರ್ ಪೇ ಮುಖಾಂತರ ಪೇಮೆಂಟ್ ಗೇಟ್ ವೇ ರಚನೆ ಮಾಡಿದ್ದು, ಇದರಲ್ಲಿ ದೊಡ್ಡವರಿಗೆ 2000 ಸಾವಿರ ಮಕ್ಕಳಿಗೆ 1000 ರೂಪಾಯಿಯಂತೆ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ, ನಾನು ಕುತೂಹಲದಿಂದ ಒಂದು ಟಿಕೆಟ್ ಬುಕ್ ಮಾಡಿದ್ದು, ನನ್ನ ಅಕೌಂಟ್ನಿಂದ ಹಣ ಸಂದಾಯವಾಗಿದೆ. ಹಾಗಾಗಿ ಇದೊಂದು ನಕಲಿ ಸೈಟ್ ಆಗಿದ್ದು, ಇದೊಂದು ಬ್ಯಾಂಡ್ ಬಂಜಾರ ಎನ್ನುವ ರಾಜಸ್ಥಾನದ ಸಂಸ್ಥೆ ನಡೆಸುತ್ತಿರುವುದಾಗಿ ಗೊತ್ತಾಗಿದೆ. ಇದರ ವಿರುದ್ಧ ನ್ಯಾಷನಲ್ ಸೈಬರ್ ಕೆಂ ಪೋರ್ಟಲ್ ಮತ್ತು ಬನ್ನೇರುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸೂರ್ಯಸೇನ್ ತಿಳಿಸಿದ್ದಾರೆ.