

ಕಳಸ: ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ ನೀಡಿದ ಆರೋಪದಲ್ಲಿ ಕೊಪ್ಪ ವಿಭಾಗ ಕಳಸ ವಲಯದ ಉಪ ವಲಯ ಅರಣ್ಯಾಧಿಕಾರಿ ಚಂದನ್ ಗೌಡ ಅವರನ್ನು ಅಮಾನತು ಮಾಡಲಾಗಿದೆ.
ಬಂಡಾಜೆ ಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಆನ್‌ಲೈನ್ ಟಿಕೆಟ್‌ಗಳನ್ನು ನಕಲು ಮಾಡಿ ಸಾವಿರಾರು ಪ್ರವಾಸಿಗರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಅನ್‌ಲೈನ್‌ನಲ್ಲಿ ಟಿಕೆಟ್‌ಬುಕ್ ಮಾಡಿದವರಿಗೆ ಚಾರಣಕ್ಕೆ ಅವಕಾಶ ನೀಡದೆ, ತಾನು ನೀಡಿದ ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರವಾಸೋದ್ಯಮ ಇಲಾಖೆ ಚಾರಣಕ್ಕೆ ಅನ್‌ಲೈನ್ ಟಿಕೆಟ್ ಬುಕಿಂಗ್ ಆರಂಭಿಸಿದೆ. ಅನ್‌ಲೈನಲ್ಲಿ ಬುಕ್ಕಿಂಗ್ ಮಾಡಿಕೊಂಡು ಬಂದರೂ ಅವಕಾಶ ನೀಡುತ್ತಿಲ್ಲ ಎಂದು ಡಿಆರ್‌ಎಫ್‌ಒ ಚಂದನ್ ಗೌಡ ವಿರುದ್ಧ ಪ್ರವಾಸಿಗರು ವಿಡಿಯೋ ಸಮೇತ ದೂರು ನೀಡಿದ್ದರು.
ಮೂಡಿಗೆರೆ ತಾಲೂಕಿನ ರಾಣಿ ಝರಿ ಪ್ರವಾಸಿ ತಾಣದ ಬಳಿಯಿಂದ ಬಂಡಾಜೆ ಾಲ್ಸ್, ಬಲ್ಲಾಳರಾಯನ ದುರ್ಗಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದರು. ಸದ್ಯ ಇದೀಗ ಮೂಡಿಗೆರೆ ತಾಲೂಕಿನ ಜಾವಳಿ ಅರಣ್ಯ ಇಲಾಖೆ ಶಾಖೆ ಉಪವಲಯ ಅರಣ್ಯಾಧಿಕಾರಿ ಚಂದನ್ ಗೌಡ ಅವರನ್ನು ಅಮಾನತು ಮಾಡಿ ಚಿಕ್ಕಮಗಳೂರು ಜಿಲ್ಲಾ ಸಿಸಿಎಫ್ ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಜತೆಗೆ ನಕಲಿ ಟಿಕೆಟ್ ಜಾಲದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.