ನಕಲಿ ಷೇರು ವ್ಯವಹಾರ: ಆನ್‌ಲೈನ್‌ನಲ್ಲಿ 66 ಲಕ್ಷ ರೂ. ವಂಚನೆ

cyber crime
Published on

ಮೈಸೂರು: ನಕಲಿ ಷೇರು ವಾರುಕಟ್ಟೆಯಲ್ಲಿ ವ್ಯವಹರಿಸಿ ವ್ಯಕ್ತಿಯೊಬ್ಬರು ಬರೋಬ್ಬರಿ 66 ಲಕ್ಷ ರೂ. ಕಳೆದುಕೊಂಡಿದ್ದಾರೆ.


ವಿಜಯನಗರದ 62 ವರ್ಷದ ನಿವೃತ್ತ ವ್ಯಕ್ತಿ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಎರಡು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಕುರಿತ ಜಾಹೀರಾತು ಕಾಣಿಸಿದೆ. ಆ ಜಾಹೀರಾತಿನಲ್ಲಿದ್ದ ಲಿಂಕ್ ಮೇಲೆ ಕ್ಲಿಕ್ ವಾಡಿದ ತಕ್ಷಣ ವ್ಯಾಟ್ಸ್ ಆ್ಯಪ್ ಗ್ರೂಪ್‌ಗೆ ಅವರ ಮೊಬೈಲ್ ನಂಬರ್ ಸೇರ್ಪಡೆಯಾಗಿದೆ. ಆ ಗ್ರೂಪ್‌ನಲ್ಲಿ ಷೇರು ವಾರುಕಟ್ಟೆ ಬಗ್ಗೆ ವಾಹಿತಿ ನೀಡಲಾಗುತ್ತಿತ್ತು. ಅಲ್ಲದೆ ಆ ಗ್ರೂಪ್‌ನಲ್ಲಿ ಸದಸ್ಯರ ಸೋಗಿನಲ್ಲಿ ವಂಚಕರು ತಾವು ಹಣ ಹೂಡಿಕೆ ವಾಡಿ, ಲಾಭ ಪಡೆದಿರುವುದಾಗಿ ಸ್ಕ್ರೀನ್ ಶಾಟ್ ಹಂಚಿಕೊಳ್ಳುತ್ತಿದ್ದರು.


ಇದನ್ನು ನಂಬಿದ ಈ ವ್ಯಕ್ತಿ, ಗ್ರೂಪ್ ಅಡ್ಮಿನ್ ಸಂಪರ್ಕಿಸಿದಾಗ ಒಂದು ಲಿಂಕ್ ಕಳುಹಿಸಿ, ಟ್ರೇಡ್ ಖಾತೆ ತೆರೆಯಲು ತಿಳಿಸಿದ್ದಾನೆ. ಅದರಂತೆ ಆ ಲಿಂಕ್ ಮೇಲೆ ಕ್ಲಿಕ್ ವಾಡಿದಾಗ ಅಪ್ಲಿಕೇಶನ್ ಇನ್ಸ್ಟಾಲ್ ಆಗಿದೆ. ಆ ಮೂಲಕ ಟ್ರೇಡಿಂಗ್ ಖಾತೆ ತೆರೆದ ವ್ಯಕ್ತಿ, ಆರಂಭದಲ್ಲಿ 1 ಲಕ್ಷ ರೂ. ಹೂಡಿಕೆ ವಾಡಿ, ಷೇರುಗಳನ್ನು ಖರೀದಿ ವಾಡಿದ್ದಾರೆ.

ಬಳಿಕ ಗ್ರೂಪ್ ಅಡ್ಮಿನ್ ಸೂಚಿಸಿದಾಗ ಷೇರುಗಳನ್ನು ವಾರಾಟ ವಾಡಿದ್ದು, 4,991 ರೂ. ಲಾಭ ಬಂದಿದೆ. ಆ ಹಣವನ್ನು ಖುಷಿಯಿಂದ ವಿತ್ ಡ್ರಾ ವಾಡಿಕೊಂಡಿದ್ದಾರೆ. ಇದರಿಂದ ನಂಬಿಕೆ ಮತ್ತಷ್ಟು ಹೆಚ್ಚಾಗಿ ಹಲವು ಹಂತಗಳಲ್ಲಿ ಒಟ್ಟಾರೆ 66,25,116 ರೂ. ಹೂಡಿಕೆ ವಾಡಿದ್ದಾರೆ. ಆ ಹೂಡಿಕೆಗೂ ಲಾಭ ಬಂದಿರುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಪ್ರದರ್ಶನವಾಗುತ್ತದೆ.

ಆದರೆ ಆ ಹಣವನ್ನು ವಿತ್‌ಡ್ರಾ ವಾಡಲು ರಿಕ್ವೆಸ್ಟ್ ಕಳುಹಿಸಿದರೆ ರಿಜೆಕ್ಟ್ ಆಗುತ್ತಿದೆ. ಈ ಬಗ್ಗೆ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net