ಕೆರೆ ಅಂಗಳಕ್ಕೂ ನಕಲಿ ದಾಖಲೆ ಸೃಷ್ಟಿ

images
Published on

ಕೋಲಾರ: ನಗರ ಸಮೀಪದ ಕಣ್ಣೂರು ಕೆರೆ ಅಂಗಳವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದ್ದು, ತಹಸೀಲ್ದಾರ್​ ವರದಿ ಆಧರಿಸಿ ಜಾಗಕ್ಕೆ ಸಂಬಂಧಿಸಿದ ನಕಲಿ ಮ್ಯುಟೇಶನ್​, ಪಹಣಿ ರದ್ದುಗೊಳಿಸಿ, ಕ್ರಮಕ್ಕೆ ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ.

ಗ್ರಾಮದ ಕೆರೆಯ ಸರ್ವೇ ನಂ&222ರ ಪೈಕಿ 2 ಎಕರೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಮ್ಯುಟೇಶನ್​, ಪಹಣಿಗಳನ್ನು ರದ್ದುಪಡಿಸಲು ಕೋರಿ ಕೋಲಾರ ತಹಸೀಲ್ದಾರ್​ ವರದಿ ಸಲ್ಲಿಸಿದ್ದರು.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 136(2) ರಂತೆ ಕಲಂ 49ರ ಅಡಿ ಮೇಲ್ಮನವಿ ಪ್ರಕರಣವನ್ನು 2021ರ ೆ.26ರಂದು ದಾಖಲಿಸಿಕೊಂಡು ಎರಡೂ ಕಡೆಯವರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು.

ನಿವೃತ್ತ ಅಟೆಂಡರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ$್ಮಣರಾಜು ಎಂಬಾತ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೆಲ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಎರಡು ಕೆರೆಯ ಜಮೀನನ್ನು ದರಖಾಸ್ತಿನಲ್ಲಿ ಮಂಜೂರು ಆಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು, ನಕಲಿ ದಾಖಲೆಗಳನ್ನು ರದ್ದುಗೊಳಿಸಲು ತಹಸೀಲ್ದಾರ್​ ವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು.

ಜತೆಗೆ ಕೋಲಾರ ಗ್ರಾಮಾಂತರ ಪ್ರದೇಶದ ಲಕ್ಷ$್ಮಣ, ಅಲ್ಲಾಬಕಾಶ್​, ಟಿ.ವೆಂಕಟರವಣಪ್ಪ, ಜಾರ್ಜ್​, ಲಕ್ಷ$್ಮಮ್ಮ, ಸಿ.ಎನ್​.ಪ್ರಕಾಶ್​, ಎನ್​.ಬೈರೇಗೌಡ, ಕೆ.ವಿ.ಕಲಾವತಿ, ಕೆ.ಎನ್​.ರಾಜಕುಮಾರ್​ ಸಿಹಾನಾ, ರತ್ನಮ್ಮ, ವಿ.ಶ್ರೀನಿವಾಸ್​, ಕೆ.ಎಸ್​.ರಾಧಮ್ಮ, ಎಂ.ರತ್ಮಮ್ಮ, ಜಯಮ್ಮ, ಎಸ್​.ರಮೇಶ್​ ಸದರಿ ಜಮೀನು ವೆಂಕಟರಾಜು ಎಂಬುವರ ಹೆಸರಿಗೆ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ, ಖಾತೆ ಬದಲಾವಣೆ ಮಾಡಿರುವ ಬಗ್ಗೆ ಅಧಿಕಾರಿ, ಸಿಬ್ಬಂದಿ ವರ್ಗದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಿ, ಮ್ಯುಟೇಷನ್​ ಆದೇಶ ಹಾಗೂ ಪಹಣಿ ರದ್ದುಪಡಿಸುವ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಂಡು ವರದಿಯಲ್ಲಿ ಸೂಚಿಸಿರುವಂತೆ ಕ್ರಮವಹಿಸಲು ತಿಳಿಸಲಾಗಿದೆ.

ಸರ್ವೇ ನಂಬರ್​ 222ರ ಮೂಲತ@ ಕೆರೆ ಅಂಗಳ ಎಂಬುದು ಸರ್ವೇ ಹಾಗೂ ಕಂದಾಯ ದಾಖಲೆಗಳಿಂದ ದೃಢಪಟ್ಟಿರುತ್ತದೆ. ಆದ್ದರಿಂದ ಉಪ ವಿಭಾಗಾಧಿಕಾರಿ ಅವರು ಅರ್ಜಿ ವಿಚಾರಣೆ ನಡೆಸಿ ಕೆರೆಯ ಅಂಗಳವಾದುದರಿಂದ ಶಿಾರಸು ತಿರಸ್ಕರಿಸಿ, ಒತ್ತುವರಿಯನ್ನು ತಕ್ಷಣ ಬಿಡಿಸಲು ಆದೇಶದಲ್ಲಿ ಸೂಚಿಸಿದ್ದಾರೆ.

 ಹಿಂದಿನ ನಡವಳಿಗಳ ಮರೆ

ವಿವಾದಿತ ಜಮೀನಿನಿಂದ ವೆಂಕಟರಾಜು ಅವರನ್ನು ಹೊರದೂಡಲು ಭೂ ಕಂದಾಯ ಅಧಿನಿಯಮ 1964ರ ಕಲಂ 104ರಡಿ ಪ್ರಾಧಿಕಾರದ ಸಂಖ್ಯೆ ಆರ್​ಎ 95/1984&85 ಆದೇಶವನ್ನು ಎದುರುದಾರ ವೆಂಕಟರಾಜು ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ನಂತರ 1985ರರಂದು ಹೊರಡಿಸಿದ ಅಂತಿಮ ಆದೇಶದಲ್ಲಿ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಲಾಗಿತ್ತು. ಈ ಆದೇಶದಿಂದ ಬಾಧಿತರಾದ ವೆಂಟಕರಾಜು, ಜಿಲ್ಲಾಧಿಕಾರಿಗಳ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲೂ ಸಹ ಮೇಲ್ಮನವಿ ವಜಾಗೊಂಡಿದ್ದು, ಇದರೆಲ್ಲದರೆ ನಡುವೆ 1992&93ರಲ್ಲಿ ವಿವಾದಿತ ಸರ್ವೇ ನಂ.222ರ ಪೈಕಿ 2 ಎಕರೆ ಜಮೀನು ಇಂಡೆಕ್ಟ್​ ಆ್​ ಲ್ಯಾಂಡ್​ರಲ್ಲಿ ವೆಂಕಟರಾಜು ಹೆಸರು ನಮೂದು ಆಗಿರುತ್ತದೆ. ಎದುರುದಾರ 1ನೇ ಮಗನ ಹೆಸರಿಗೆ ಪಹಣಿ ನಮೂದಿಸಲು ತಹಸೀಲ್ದಾರ್​ 1992&93ರಲ್ಲಿ ಆದೇಶಿಸಿರುವುದು ಕಂಡು ಬಂದಿದೆ. ಆದರೆ ಈ ಹಿಂದೆ ನಡೆದಿರುವ ನಡವಳಿಗಳನ್ನು ಪ್ರಸ್ತಾಪಿಸದೆ ಮರೆ ಮಾಚಲಾಗಿತ್ತು, ಆಗ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅನಧಿಕೃತವಾಗಿ ಖಾತೆ ಮಾಡಿಸಿಕೊಂಡು ಎದುರುದಾರ 2 ಎಕರೆ ಪೈಕಿ ಪರಭಾರೆ ಮಾಡಿ ಅಂತಿಮವಾಗಿ ಉಳಿದ ಜಮೀನು ಎದುರುದಾರರ ಹೆಸರಿಗೆ ಹಕ್ಕು ಬದಲಾವಣೆ ಮಾಡಿರುವುದು ಪಹಣಿಯಲ್ಲಿ ಕಂಡು ಬಂದಿದೆ. ಆದ್ದರಿಂದ ಪಹಣಿಯಲ್ಲಿರುವ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ರದ್ದುಗೊಳಿಸಿ ಆದೇಶಿಸಿದ್ದು, ಕೆರೆ ವಿಸ್ತೀರ್ಣದಲ್ಲಿ ವಿಲೀನಗೊಳಿಸಲು ತಹಸೀಲ್ದಾರ್​ ಅವರಿಗೆ ಎಸಿ ಸೂಚಿಸಿದ್ದಾರೆ.

ಕೆರೆ ಅಂಗಳದ ಜಮೀನಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಗಳು ದಾಖಲೆಗಳನ್ನು ಸೃಷ್ಟಿಸಿ ಇತರರಿಗೆ ಪರಭಾರೆ ಮಾಡಿದ್ದರು. ಈ ಬಗ್ಗೆ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾವೆ ಹೂಡಿ, ಸರ್ಕಾರದ ಆಸ್ತಿ ಕಾಪಾಡಲಾಗಿದೆ. ಇಂತಹ ಪ್ರಕರಣಗಳು ಇನ್ನೂ ಹೆಚ್ಚಿಗೆ ಇದ್ದು, ಸರ್ಕಾರದ ಜಮೀನು ಉಳಿಸಲು ಅಧಿಕಾರಿಗಳು ಮುಂದಾಗಬೇಕು. ಕೆರೆ ಅಂಗಳದ ಜಮೀನಿಗೆ ಸಂಬಂಧಿಸಿದಂತೆ ಮಿಸ್ಸಿಂಗ್​ ಕಡತ ತಯಾರಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಕಂದಾಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೆ ಸರ್ಕಾರಿ ಜಾಗವನ್ನು ಉಳಿಸುವ ಕೆಲಸ ಮಾಡಬೇಕು.

> ಎ.ನಳನಿಗೌಡ

ರೈತ ಸಂ ಜಿಲ್ಲಾಧ್ಯೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net