ಮೈಸೂರಿನಲ್ಲಿ ‘ಫೆವಿಕ್ವಿಕ್’ ನಕಲಿ ಉತ್ಪನ್ನ ಮಾರಾಟ : ಪ್ರಕರಣ ದಾಖಲು

Fake product sale of Feviquik in Mysore Case registered
Published on

ಮೈಸೂರು: ನಕಲಿ ‘ಫೆವಿಕ್ವಿಕ್’ ಉತ್ಪನ್ನ ಮಾರಾಟ ಮಾಡುತ್ತಿದ್ದ ಸಂತಪೇಟೆಯ ಮಹೇಶ್ ಏಜೆನ್ಸಿ ಮಾರ್ಕೆಟಿಂಗ್ ಅಂಗಡಿ ಮಾಲೀಕ ವರದರಾಮ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದ್ದು, 1860 ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಫೆವಿಕ್ವಿಕ್ ಕಂಪನಿಯ ಪ್ರತಿನಿಧಿಗಳಾದ ಪೂಬಾಲನ್, ಶೇಖ್ ವಾಸಿಂ ನೀಡಿದ ದೂರಿನ ಮೇರೆಗೆ ದೇವರಾಜ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ದಾಳಿಯಲ್ಲಿ ದೇವರಾಜ ಠಾಣೆಯ ಇನ್ಸ್‌ಪೆಕ್ಟರ್ ಟಿ.ಬಿ.ಶಿವಕುಮಾರ್, ಎಸ್‌ಐ ಎಂ. ಜೈಕೀರ್ತಿ, ಸಿಬ್ಬಂದಿ ಮಂಚನಾಯಕ್, ಶಿವರಾಜು, ಮನೋಹರ್, ಮಂಜುನಾಥ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net