

ಕಾಸರಗೋಡು: ಲಾಟರಿಯಲ್ಲಿ ಹತ್ತು ಲಕ್ಷ ರೂ.ಬಹುಮಾನ ಲಭಿಸಿದೆ ಎಂಬ ಮೊಬೈಲ್ ಸಂದೇಶದ ಹಿಂದೆ ಬಿದ್ದ ಮಹಿಳೆ 8ಸಾವಿರ ರೂ. ಕಳೆದುಕೊಂಡ ಘಟನೆ ಪೆರ್ಲದಲ್ಲಿ ನಡೆದಿದೆ.
ತನ್ನ ಮೊಬೈಲ್‌ಗೆ ಹತ್ತು ಲಕ್ಷ ರೂ. ಲಾಟರಿ ಬಹುಮಾನ ಲಭಿಸಿದ್ದು, ತಕ್ಷಣ ಎಂಟು ಸಾವಿರ ರೂ. ಗೂಗಲ್ ಪೇ ಮೂಲಕ ಪಾವತಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಹಣ ಪಾವತಿಸಿದ್ದಾರೆ. ಇದಾದ ನಂತರ ಜಿಎಸ್‌ಟಿ ಮೊತ್ತ 51ಸಾವಿರ ಪಾವತಿಸುವಂತೆ ಸಂದೇಶ ಬಂದಿದೆ. ಈ ಹಣ ಗೂಗಲ್ ಪೇ ಮೂಲಕ ಪಾವತಿಸಲು ಸಾಧ್ಯವಾಗದಿದ್ದಾಗ ಪೆರ್ಲದ ಅಂಗಡಿಯೊಂದಕ್ಕೆ ತೆರಳಿ ಹಣ ಪಾವತಿಸುವಂತೆ ಕೇಳಿಕೊಂಡಿದ್ದು, ಇದು ವಂಚನೆ ಎಂದು ತಿಳಿಸಿದರೂ ಮಹಿಳೆ ಕೇಳದಿರುವಾಗ ಅಂಗಡಿಯವರು ಬದಿಯಡ್ಕ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮಹಿಳೆಯನ್ನು ಸಂಪರ್ಕಿಸಿ ಆನ್‌ಲೈನ್ ವಂಚನೆ ಬಗ್ಗೆ ಮನವರಿಕೆ ಮಾಡಿದಾಗ ಮಹಿಳೆಗೆ ತಾನು ಮೋಸಹೋಗಿರುವುದು ಗಮನಕ್ಕೆ ಬಂದಿದೆ.