

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಘಟಗಿ ತಾಲೂಕು ಮಿಶ್ರಿಕೋಟಿ ಕ್ರಾಸ್ ಹತ್ತಿರದ ಪಾಟೀಲ ಎಂಬುವರ ಗೋದಾಮಿನ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಕಲಘಟಗಿ ಠಾಣೆ ಪೊಲೀಸರು, ಸುಮಾರು 32 ಲಕ್ಷ ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಗೋದಾಮಿನಲ್ಲಿ ನಕಲಿ ಮದ್ಯಕ್ಕೆ ಅಮಲು ಬರುವ ಪದಾರ್ಥ, ಬಣ್ಣ ಮಿಶ್ರಣ ಮಾಡಿ ಖಾಲಿ ಬಾಟಲ್‌ಗಳಿಗೆ ತುಂಬಿ ದುಬಾರಿ ಬ್ರ‍್ಯಾಂಡ್‌ನ ಲೇಬಲ್ ಅಂಟಿಸಿ ನಕಲಿ ಮದ್ಯ ತಯಾರಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 32 ಲಕ್ಷ ರೂಪಾಯಿ ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡು ನಾಲ್ವರನ್ನು ಬಂಽಸಿದ್ದಾರೆ.
ಕಲಘಟಗಿ ಠಾಣೆ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಸಿಬ್ಬಂದಿ ಆರ್.ಎಂ. ಸಂಕಿನದಾಸರ, ಲೋಕೇಶ ಬೆಂಡಿಕಾಯಿ, ಶಂಕರ ಕಟ್ಟಿಮನಿ, ಸಿದ್ದು ಹೊಸಳ್ಳಿ, ಗಣೇಶ ಕಾಂಬ್ಳೆ, ಗೋಪಾಲ ಪಿರಗಿ, ಶ್ರೀಧರ ಗುಗ್ಗರಿ, ಮಹಾಂತೇಶ ನಾನಾಗೌಡ, ಶಿವಶರಣ ಕಚನೂರ, ಪ್ರವೀಣ ಅಂಗಡಿ, ಅಭಿನಂದನ ಮಾದಪ್ಪನವರ, ಮಹಮ್ಮದ ಹುಸೇನ್, ಸಂಜು ಜಾಲಗಾರ, ಈಶ್ವರ ಡೊಣ್ಣಿ, ಮಹೇಶ ಧರೆಪ್ಪನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ತಂಡದಲ್ಲಿದ್ದ ಸಿಬ್ಬಂದಿಗೆ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ ವಿಶೇಷ ಬಹುಮಾನ ಘೋಷಿಸಿದ್ದಾರೆ.