ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಿ - ಮಹಾವೀರ ಬೋರನ್ನವರ

01020102012012
Published on

ನಿಪ್ಪಾಣಿ: ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಅವರು ಹಗಲು ದರೋಡೆ ನಡೆಸುತ್ತಿದ್ದಾರೆ. ಅವುಗಳಿಗೆ ಕಡಿವಾಣ ಹಾಕುವುದು ಅವಶ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ ಹೇಳಿದ್ದಾರೆ.

ಪತ್ರಕರ್ತರ ದಿನಾಚರಣೆ ನಿಮಿತ್ತ ನಗರಸಭೆಯ ದಿ. ವಿಶ್ವಾಸರಾವ ಶಿಂಧೆ ಸಭಾಗೃಹದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸತ್ಕರಿಸಿ ಅವರು ಶುಕ್ರವಾರ ಮಾತನಾಡಿದರು.
ಪ್ರಾಮಾಣಿಕ ಪತ್ರಕರ್ತರು ವೃತ್ತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೆ, ಅಡಚಣೆಗಳನ್ನು ಎದುರಿಸಿ ಮುಂದುವರಿಯುತ್ತಾರೆ. ಆದರೆ, ಕೆಲವರೂ ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಭ್ರಷ್ಟರಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲಿಯಾಕತ ಶಿರಕೋಳಿ ಮಾತನಾಡಿ, ನಗರ ಹಾಗೂ ಸುತ್ತಮುತ್ತಲಿನ ಪತ್ರಕರ್ತರನ್ನು ಕರೆಯಿಸಿ ಅವರನ್ನು ಸನ್ಮಾನಿಸುತ್ತಿರುವುದು ಇದೇ ಮೊದಲು, ಇದರಿಂದ ಪತ್ರಕರ್ತರಲ್ಲಿ ವೃತ್ತಿ ನಿಷ್ಠೆ, ಗೌರವ ಹೆಚ್ಚುತ್ತದೆ. ತಾಲೂಕು ಪತ್ರಕರ್ತರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ನಿವೇಶನ ನೀಡಬೇಕು. ಈ ನಿಟ್ಟಿನಲ್ಲಿ ಪೌರಾಯುಕ್ತರು ನೆರವಾಗಬೇಕು ಎಮದರು.

ಪತ್ರಕರ್ತ ಮಹೇಶ ಶಿಂಪುಕಡೆ, ವಿಠ್ಠಲ ಕೇಸರಕರ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಉಪಾಧ್ಯಕ್ಷ ಬಂಡು ಕುಂಬಾರ, ನಗರಸಭೆ ಅಧಿಕಾರಿಗಳಾದ ನಾಗೇಂದ್ರ ಬಹಾದ್ದೂರಿ, ಸ್ವಾನಂದ ತೋಡಕರ, ವಿನಾಯಕ ಜಾಧವ, ಶರದ ಸಾವಂತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net