ಯುವತಿ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ

Published on

ಮೈಸೂರು: ಯುವತಿಯೊಬ್ಬಳ ಪೋಟೋ ಹಾಕಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಸಂದೇಶ, ವಿಡಿಯೋ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ನನ್ನ ಪೋಟೋ ಹಾಕಿ, ನನ್ನ ಹೆಸರಿನಲ್ಲಿ ಯಶ್ವಂತ್ ಎಂಬಾತ ನಕಲಿ ಅಕೌಂಟ್ ಮಾಡಿದ್ದಾನೆ. ಅಶ್ಲೀಲ ಸಂದೇಶ ಪೋಸ್ಟ್ ಮಾಡಿದ್ದಾನೆ. ಅಲ್ಲದೇ ಮತ್ತೊಂದು ಇನ್ಸ್ಟಾಗ್ರಾಂ ನಲ್ಲೂ ನಕಲಿ ಅಕೌಂಟ್ ಮಾಡಿ ಖಾಸಗಿ ಚಿತ್ರ, ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನನ್ನ ಖಾಸಗಿ ಜೀವನಕ್ಕೆ ಧಕ್ಕೆ ಉಂಟು ಮಾಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ 21 ವರ್ಷದ ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net