ನಕಲಿ ಗನ್ ತೋರಿಸಿ ಸರ ಕದ್ದಿದ್ದ ದಂಪತಿ ಸೆರೆ

harapanahalli Arrest
ಕಳ್ಳ ದಂಪತಿಯಿಂದ ಹರಪನಹಳ್ಳಿ ಪೊಲೀಸರು ವಶಕ್ಕೆ ಪಡೆದ ವಸ್ತುಗಳು. ಡಿವೈಎಸ್ಪಿ ವೆಂಕಟಪ್ಪ ನಾಯಕ, ಸರ್ಕಲ್ ಇನ್ಸ್‌ಪೆಕ್ಟರ್ ವಸಂತಪ್ಪ, ಪಿಎಸ್‌ಐ ಶಂಭುಲಿಂಗಯ್ಯ ಎಸ್.ಹಿರೇಮಠ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
Published on

ಹರಪನಹಳ್ಳಿ: ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ನಕಲಿ ಗನ್ ತೋರಿಸ ಚಿನ್ನದ ಸರ ಕದ್ದೊಯದ್ದಿದ್ದ ಕಳ್ಳ ದಂಪತಿಯನ್ನು ಸ್ಥಳೀಯ ಪೊಲೀಸರು ಮೂರೇ ಗಂಟೆಯಲ್ಲಿ ಬಂಧಿಸಿದ್ದಾರೆ.

ಹೂವಿನಹಡಗಲಿ ತಾಲೂಕಿನ ಅಡವಿಮಲ್ಲನಕೇರಿ ತಾಂಡಾದ ಚೈತ್ರಾ ಹಾಗೂ ಕೇಶವನಾಯ್ಕ ಬಂಧಿತರು. ಸಮೀಪದ ನಂದಿ ರೆಸಾರ್ಟ್‌ನ ಕಾಫಿ ಸ್ಟಾಲ್‌ನಲ್ಲಿ ಗುರುವಾರ ಶ್ರೀದೇವಿ ಅವರಿಗೆ ಚಾಕಲೇಟ್ ಕೇಳುವ ನೆಪದಲ್ಲಿ ಅವರ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಬೈಕ್ ಹತ್ತಿ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಶ್ರೀದೇವಿ ಚೀರಾಡಿ ಆರೋಪಿಗಳ ಹತ್ತಿರ ಬಂದು ಕಸಿದುಕೊಳ್ಳಲು ಮುಂದಾದಾಗ ಕಳ್ಳ ದಂಪತಿ ನಕಲಿ ಗನ್ ತೋರಿಸಿ ಪರಾರಿಯಾಗಿದ್ದರು. ಈ ಕುರಿತು ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಿಪಿಐ ನಾಗರಾಜ್ ಕಮ್ಮಾರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದು, ಮೂರೇ ಗಂಟೆಯಲ್ಲಿ ಅಡವಿಮಲ್ಲನಕೇರಿ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರಿಂದ ಮಾಂಗಲ್ಯ ಸರ, ಎರಡು ನಕಲಿ ಗನ್, ಒಂದು ಬೈಕ್, ಮೂರು ಮೊಬೈಲ್, ಎರಡು ಜರ್ಕಿನ್ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಯನ್ನು ವಿಜಯನಗರ ಜಿಲ್ಲಾ ಎಸ್ಪಿ ಹರೀಶ್ ಬಾಬು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net