ನಕಲಿ ಚಿನ್ನ ವಂಚಕರ ಮೇಲೆ ನಿಗಾ: ಹರಪನಹಳ್ಳಿಯಲ್ಲಿ ಎಸ್ಪಿ ಸೈದುಲು ಅದಾವತ್ ಹೇಳಿಕೆ

Harapanahalli Circle SP DYSP Visit
ಹರಪನಹಳ್ಳಿಯ ಬಸ್ ನಿಲ್ದಾನ ಮತ್ತು ಹರಿಹರ ವೃತ್ತದ ಬಳಿ ರಸ್ತೆ ನಿಯಂತ್ರಣಕ್ಕೆ ಸಂಬಂಧಿಸಿ ಎಸ್ಪಿ ಸೈದುಲು ಅದಾವತ್ ಪರಿಶೀಲನೆ ನಡೆಸಿದರು.
Published on

ಹರಪನಹಳ್ಳಿ: ನಕಲಿ ಚಿನ್ನ ನೀಡಿ ಮೋಸ ಮಾಡುವವರ ಮೇಲೆ ನಿಗಾ ಇಡಲಾಗಿದೆ. ಇಂತಹ ಪ್ರಕರಣಗಳನ್ನು ಶಾಶ್ವತವಾಗಿ ಮಟ್ಟ ಹಾಕಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಹರಪನಹಳ್ಳಿ ಸೇರಿದಂತೆ ಕೊಟ್ಟೂರು, ಹಡಗಲಿ, ಕೂಡ್ಲಿಗಿಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೆಲವು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಗಣಿಗಾರಿಕೆ ತಡೆಗೆ ತಾಲೂಕು ಮಟ್ಟದಲ್ಲೂ ಮೈನಿಂಗ್ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗುವುದು. ತಾಲೂಕಿನ ಹಲುವಾಗಲು ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಮೈಲಾರ ಸೇತುವೆ ಬಳಿ ಮರಳು ಅಕ್ರಮ ಸಾಗಣೆ ತಡೆಗಟ್ಟಲು ಕ್ರಮವಹಿಸಲಾಗಿದೆ ಎಂದರು.

ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಸಿ.ಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net