

ಕಾರವಾರ:ಸೈಬರ್ ವಂಚಕರು ನಕಲಿ ಫೇಸ್‌ಬುಕ್ ಖಾತೆ ರಚಿಸಿ ಹಣ ಕೇಳುವುದು ಸಾಮಾನ್ಯವಾಗಿದೆ. ಆದರೆ, ಈ ಬಾರಿ `ಉತ್ತರ ಕನ್ನಡ' ಜಿಲ್ಲಾಧಿಕಾ ಖಾತೆಯನ್ನೇ ನಕಲಿಸಲಾಗಿದೆ.
`ಡೆಪ್ಯುಟಿ ಕಮೀಷನರ್ ಉತ್ತರ ಕನ್ನಡ' ಎಂಬ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ 2017 ರಿಂದಲೂ ಅಧಿಕೃತ ಫೇಸ್‌ಬುಕ್ ಖಾತೆ ಹಾಗೂ ಪೇಜ್ ಹೊಂದಿದೆ. ಜಿಲ್ಲಾಽಕಾರಿ ಅವರ ಸಾರ್ವಜನಿಕ ಸಂದೇಶಗಳನ್ನು ಅದರಲ್ಲಿ ಹಂಚಿಕೊಳ್ಳಲಾಗುತ್ತದೆ. ಸುಮಾರು 8 ಸಾವಿರದಷ್ಟು ಫಾಲೋವರ್‌ಗಳು, ಸಾಕಷ್ಟು ಸ್ನೇಹಿತರು ಈ ಪೇಜ್ ಹಾಗೂ ಅಕೌಂಟ್‌ಗೆ ಇದ್ದಾರೆ. ಅದನ್ನು ಜಿಲ್ಲಾಽಕಾರಿ ಅವರ ಆಪ್ತ ಸಹಾಯಕ ವಿಭಾಗ ಅದನ್ನು ನಿರ್ವಹಿಸುತ್ತದೆ.
ಆದರೆ, ನಾಲ್ಕು ದಿನಗಳ ಹಿಂದೆ ಇದೇ ಹೆಸರಿನಲ್ಲಿ ಇನ್ನೊಂದು ಅಕೌಂಟ್ ಕ್ರಿಯೇಟ್ ಆಗಿದ್ದು, ಹಾಲಿ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಅವರ ಫೋಟೋ ಬಳಸಿ ಖಾತೆ ತೆರೆಯಲಾಗಿದೆ. ಆದರೆ, ಅದರಲ್ಲಿ ಯಾವುದೇ ಹಿಂದಿನ ಲಿಂಕ್‌ಗಳನ್ನು ಸೇರಿಸದೇ ವಂಚಕರು ಮೆಸೆಂಜರ್ ಮೂಲಕ ಕೆಲವರಿಗೆ ವೈಯಕ್ತಿಕ ಸಂದೇಶ ಕಳಿಸಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಸತೀಶ ಸೈಲ್ ಗೂ ಸ್ಪಿರಿಟ್ ಟ್ಯಾಂಕರ್ ಗೂ ಸಂಬಂಧವೇನು..? – ಬಿಜೆಪಿ ಪ್ರಶ್ನೆ
ವ್ಯಕ್ತಿಯೊಬ್ಬರ ನಂಬರ್ ಕೇಳಿ ಪಡೆದು, ನನ್ನ ಪರಿಚಯದ ಸಿಆರ್‌ಪಿಎಫ್ ಅಽಕಾರಿ ಸಂತೋಷ ಕುಮಾರ್ ಎಂಬುವವರಿದ್ದಾರೆ. ಅವರು ವರ್ಗಾವಣೆಯಾಗಿದ್ದು, ಅವರು ಮನೆಯ ಸಾಮಗ್ರಿಗಳಿವೆ. ಅವನ್ನು ಬೇಕಾದರೆ ಕೊಳ್ಳಬಹುದು ಎಂದು ಸಲಹೆ ನೀಡಲಾಗಿದೆ. ಆದರೆ, ಇಂಥ ಸಂದೇಶದಿAದ ಅನುಮಾನಗೊಂಡ ವ್ಯಕ್ತಿ ನನಗೆ ಫರ್ನಿಚರ್‌ಗಳು ಬೇಡ ಎಂದು ಪ್ರತಿಕ್ರಿಯಿಸಿದ್ದು, ಇದನ್ನು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ನಕಲಿ ಖಾತೆ ಡಿ.ಆ್ಯಕ್ಟಿವೇಟ್ ಆಗಿದೆ.