ಖೋಟಾ ನೋಟು ದಂಧೆ: ಪೋಲೀಸ್ ಸೇರಿ ನಾಲ್ವರ ಬಂಧನ

Published on

ರಾಯಚೂರು ಖೋಟಾ ನೋಟು ದಂಧೆ ನಡೆಸಲು ಯತ್ನಿಸಿದ್ದ ಪೊಲೀಸ್ ಅಽಕಾರಿ ಸೇರಿ ನಾಲ್ಕು ಜನರನ್ನು ಬಂಽಸಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಡಿಎಆರ್ ವಿಭಾಗದ ಎಆರ್‌ಎಸ್‌ಐ ಮರಿಲಿಂಗ ಸೇರಿ ದೇವದುರ್ಗ ಹಾಗೂ ಮಾನ್ವಿ ಮೂಲದ ಸದ್ದಂ,,ರಮೇಶ್ ಅದಿ,ಶಿವಲಿಂಗ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಮಾ.೧೪ ರಂದು ನಗರದ ಕಾಕತೀಯ ಕಾಲೊನಿಯಲ್ಲಿ ಮನೆ ಮಾಡಿಕೊಂಡ ಆರೋಪಿಗಳು ಇಲ್ಲಿಂದಲೇ ಖೋಟಾ ನೋಟು ದಂಧೆ ನಡೆಸುವ ಯೋಜನೆ ಹಾಕಿಕೊಂಡಿದ್ದರು. ನಗರದ ಪಶ್ಚಿಮ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧನ ಮಾಡಿ, ಬಂಽತರಿAದ ಖೋಟಾ ನೋಟು ಮುದ್ರಿಸಲು ಬಳಸುತ್ತಿದ್ದ ಪೇಪರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net