ಹೊಸಪೇಟೆಯಲ್ಲಿ ನಕಲಿ ನೋಟು: ಐವರ ಬಂಧನ
ಆರೋಪಿಗಳಿಂದ 1.56 ಲಕ್ಷ ರೂ. ಮೊತ್ತದ ಖೋಟಾ ನೋಟು ವಶ

IMG_20220821_210657.jpg
Published on

ಹೊಸಪೇಟೆ: ನಗರದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ದಾವಣಗೆರೆ ಜಿಲ್ಲೆ ವದಗನಹಟ್ಟಿ ನಿವಾಸಿ
ಕುಬೇರಪ್ಪ ತಳವಾರ (58), 
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಡ್ಡಗೋಪೆನ ಹಳ್ಳಿಯ ರುದ್ರೇಶ್(39) , ಮಂಡ್ಯ ಜಿಲ್ಲೆ ಮೊಗರಹಳ್ಳಿ ನಿವಾಸಿ ಎಸ್. ರಾಜೇಶ್(28), ರವಿ(೩೦),  ಮೈಸೂರು ವಿನಾಯಕ ನಗರದ ಪ್ರಶಾಂತ(೩೦) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ  ೫೦೦ ರೂ. ಮುಖ ಬೆಲೆಯ ೧.೫೬ ಲಕ್ಷ ರೂ. ಮೊತ್ತದ ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಶನಿವಾರ ನಗರದ ರಾಣಿ ಪೇಟೆ ವೆಂಕಟೇಶ್ವರ ಲಾಡ್ಜನಲ್ಲಿ ತಂಗಿದ್ದು, ಖೋಟಾ ನೋಟು ಚಲಾವಣೆಗೆ ಬಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಟ್ಟಣ ಠಾಣೆ ಪೊಲೀಸರು ದಾಳಿ ನಡೆಸಿದರು.
ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡಿಎಸ್ಪಿ ವಿಶ್ವನಾಥ ಕುಲಕರ್ಣಿ 
ಮಾರ್ಗದರ್ಶನದಲ್ಲಿ, ಇನ್ಸ್ ಪೆಕ್ಟರ್ ಜಯಪ್ರಕಾಶ್ ನೇತೃತ್ವದಲ್ಲಿ, ಎ.ಎಸ್.ಐ
ಕೊದಂಡಪಾಣಿ, ಮಲ್ಲೇಶಪ್ಪ ಸಿಬ್ಬಂದಿಗಳಾದ ಶ್ರೀನಿವಾಸ, ನಾಗರಾಜ, ಬಿ.ರಾಘವೇಂದ್ರ, ಜಾವೇದ್ ಅಶ್ರಪ್, ಅನಿಲ್ ಕುಮಾರ್, ಶ್ರೀರಾಮರೆಡ್ಡಿ, ಪರಶುನಾಯ್ಕ್, ಲಿಂಗರಾಜ, ಜೆ.ಪಕ್ಕೀರಪ್ಪ, ಗೋವರ್ದನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net