ನಕಲಿ ಮಾಂಗಲ್ಯ ಸರವಿಟ್ಟು ಅಸಲಿ ಕದ್ದವಳ ಸೆರೆ

doddapete
Published on

ಶಿವಮೊಗ್ಗ: ಬಿ.ಎಚ್.ರಸ್ತೆಯಲ್ಲಿನ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ತೆರಳಿ ನಕಲಿ ಮಾಂಗಲ್ಯ ಸರವಿಟ್ಟು ಅಸಲಿ ಸರ ಕಳವು ಮಾಡಿದ್ದ ಮಹಿಳೆಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆ ಚಿರಸ್ತಹಳ್ಳಿ ಗ್ರಾಮದ ರತ್ನಾ ಬಂಧಿತ ಮಹಿಳೆ. ಈಕೆ 2022ರ ನ.24ರಂದು ಬಿ.ಎಚ್.ರಸ್ತೆಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಚಿನ್ನಾಭರಣ ಮಳಿಗೆಗೆ ಹೋಗಿ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಗಮನ ಬೇರೆಡೆ ಸೆಳೆದು 60 ಸಾವಿರ ರೂ. ಮೌಲ್ಯದ 10.938 ಗ್ರಾಂ ಮಾಂಗಲ್ಯ ಸರ ಎಗರಿಸಿದ್ದಳು.

ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಅಂಜನಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದು ಮಹಿಳೆಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜಮ್ಮ, ಎಎಸ್‌ಐ ಚಂದ್ರಶೇಖರ್, ಪೇದೆಗಳಾದ ಪಾಲಾಕ್ಷ ನಾಯ್ಕ್, ಶಶಿಧರ್, ಗುರುನಾಯ್ಕ್, ಚಂದ್ರಾನಾಯ್ಕ್, ಮನೋಹರ್, ಪೂಜಾ ಪಾಲ್ಗೊಂಡಿದ್ದರು. ಈಕೆ ಈ ಹಿಂದೆ ನಗರದ ಮತ್ತೊಂದು ಚಿನ್ನಾಭರಣ ಮಳಿಗೆಯಲ್ಲೂ ಕೈಚಳಕ ತೋರಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net