ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಕಂದಾಯ ನಿರೀಕ್ಷಕನಿಗೆ 2 ವರ್ಷ ಜೈಲುಶಿಕ್ಷೆ

Court 20 dec 19
Published on

ಮಸ್ಕಿ: ಬಳಗಾನೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗುಡದೂರು ಗ್ರಾಮದಲ್ಲಿ 2010-11 ನೇ ಸಾಲಿನಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ವೆಂಕಟೇಶ ಅವರು ನಂಜಲದಿನ್ನಿಯ ಮಹಿಳೆಗೆ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಹಿನ್ನೆಲೆ 2 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡಕ್ಕೆ ಗುರಿಯಾಗಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅಂದಿನ ಪಿಎಸ್‌ಐ ಅಜರುದ್ದೀನ್ ದೂರು ದಾಖಲಿಸಿಕೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಂದನೂರಿನ 1ನೇ ಹೆಚ್ಚುವರಿ ನ್ಯಾಯಾದೀಶ ಶ್ರೇಯಾಂಶ ಎನ್.ದೊಡ್ಡಮನಿ ದಂಡ ವಿಧಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net