ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿ ಬಂಧನ

IMG-20231125-WA0020.jpg
Published on


ಬೆಳಗಾವಿ: ತಾಲೂಕಿನ ಹಾಲಭಾವಿ ಗ್ರಾಮದ ಬಳಿಯಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತರಬೇತಿ ಕ್ಯಾಂಪ್‌ನಲ್ಲಿ ಕಾನ್‌ಸ್ಟೇಬಲ್ ಟ್ರೇಡ್‌ಮನ್ ನೇಮಕಾತಿ ವೇಳೆ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.
ಮಧ್ಯಪ್ರದೇಶ ರಾಜ್ಯದ ಜನಕಪುರ ಗ್ರಾಮದ ಅಂಕಿತ ಬಸುದೇವ ಬಂಽತ ನಕಲಿ ಅಭ್ಯರ್ಥಿ. ನಿಜವಾದ ಅಭ್ಯರ್ಥಿ ಮಧ್ಯಪ್ರದೇಶದ ಗವಾಸರ್ಜನಪುರ ಗ್ರಾಮದ ಚೋಟು ದೇವೆಂದರ ಸಿಂಗ್ ಪರಾರಿಯಾಗಿದ್ದಾನೆ.
ಐಟಿಬಿಪಿ ೪೪ನೇ ಕೇಂದ್ರದಲ್ಲಿ ನ.೨೩ರಂದು ನಡೆದ ಕಾನ್‌ಸ್ಟೇಬಲ್ ಟ್ರೇಡ್‌ಮನ್ ನೇಮಕಾತಿ ವೈದ್ಯಕೀಯ ಪರೀಕ್ಷೆಯಲ್ಲಿ ಚೋಟು ದೇವೆಂದರ ಸಿಂಗ್ ಅನುತ್ತೀರ್ಣನಾಗಿದ್ದನು. ನ.೨೪ರಂದು ನಡೆದ ಮರು ವೈದ್ಯಕೀಯ ಪರೀಕ್ಷೆಗೆ ಅಂಕಿತ ಬಸುದೇವ ಎಂಬುವವರನ್ನು ಕಳುಹಿಸಿಕೊಟ್ಟಿದ್ದಾನೆ. ಈ ವೇಳೆ ಅಽಕಾರಿಗಳಿಗೆ ಅನುಮಾನ ವ್ಯಕ್ತವಾಗಿ ನಕಲಿ ಅಭ್ಯರ್ಥಿಯನ್ನು ವಿಚಾರಣೆಗೊಳಪಡಿಸಿದಾಗ ತಪು÷್ಪ ಒಪ್ಪಿಕೊಂಡಿದ್ದಾನೆ. ಈ ಕುರಿತು ಐಟಿಬಿಪಿ ಅಽಕಾರಿ ಅಮಿತ ಕುಮಾರ ಮಿಶ್ರಾ ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net