ಭಾರತೀಯ ಜ್ಞಾನಪದ್ಧತಿ-ಆಧುನಿಕ ತಂತ್ರಜ್ಞಾನದ ಬೆಸುಗೆ ಅಗತ್ಯ

jss
Published on

ಮೈಸೂರು: ಭಾರತೀಯ ಜ್ಞಾನ ಪದ್ಧತಿಗೆ ಸುದೀರ್ಘ ಇತಿಹಾಸವಿದ್ದು, ಭಾರತೀಯ ಜ್ಞಾನಪದ್ಧತಿಯನ್ನು ಹಾಗೂ ಆಧುನಿಕ ತಂತ್ರಜ್ಞಾನವನ್ನು ಬೆಸುಗೆ ಹಾಕುವ ಅವಶ್ಯಕತೆ ಇದೆ ಎಂದು ಅಗತ್ಯವಿದೆ ಎಂದು ಬೆಂಗಳೂರಿನ ಉದ್ಯಮಿ ಕೆ.ಉಲ್ಲಾಾಸ್ ಕಾಮತ್ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸ್ಕೂಲ್ ಆಫ್‌ಲೈಫ್ ಸೈನ್ಸಸ್ ಸಭಾಂಗಣದಲ್ಲಿ ‘ಭಾರತೀಯ ಜ್ಞಾನ ಪದ್ಧತಿ’ ಕುರಿತು ಮೂರು ದಿನಗಳ ಕಾಲ ಆಯೋಜಿಸಿರುವ ಬೋಧನಾ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಮಯಾಣ, ಮಹಾಭಾರತ, ವೇದಗಳು, ಭಗವದ್ಗೀತೆ ಮುಂತಾದ ಗ್ರಂಥಗಳಲ್ಲಿ ನಮ್ಮ ಜ್ಞಾನದ ಮಹತ್ವ ಅರಿಯಬಹುದು. ಇಷ್ಟು ಮಾತ್ರಲ್ಲದೆ, ಆರೋಗ್ಯ, ಮಾನವೀಯ ಮೌಲ್ಯಗಳಲ್ಲೂ ನಮ್ಮ ಪದ್ಧತಿ ಕಾಣಬಹುದು. ಆಯುರ್ವೇದ, ಹೋಮಿಯೋಪತಿ ಮುಂತಾದ ವೈದ್ಯ ಪದ್ಧತಿಗಳು ಆಗಿನ ಕಾಲದಲ್ಲೇ ಬಹಳ ಪ್ರಾಮುಖ್ಯತೆ ಗಳಿಸಿದ್ದವು. ಇಷ್ಟು ಉನ್ನತವಾಗಿರುವ ನಮ್ಮ ಜ್ಞಾನ ಪದ್ಧತಿಗೆ ಈಗಿನ ಆಧುನಿಕ ತಂತ್ರಜ್ಞಾನವನ್ನು ಬೆಸೆದರೆ ವಿಷ್ಯದ ಪೀಳಿಗೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ದೇಶದ ಆರ್ಥಿಕತೆಯು ಜಗತ್ತಿನಲ್ಲಿ 4ನೇ ಸ್ಥಾನದಲ್ಲಿ ಇದ್ದು, ಮುಂದಿನ ದಿನಗಳಲ್ಲಿ 3ನೇ ಸ್ಥಾನಕ್ಕೆ ಬರುವುದು ನಿಶ್ಚಿತ. ದೇಶದ ಆರ್ಥಿಕತೆ ಬೆಳೆಯುತ್ತಿದ್ದರೂ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣದ ಪ್ರಮಾಣ ಹೆಚ್ಚಾಗಿಲ್ಲ. ದೇಶದ ಪ್ರಗತಿಯೊಂದಿಗೆ ನಾವು ಬೆಳೆಯುತ್ತಿಲ್ಲ. ದೇಶದೊಂದಿಗೆ ನಾವು ಸಹ ಬೆಳೆಯಬೇಕಾಗಿದೆ. ಸಂಬಳಕ್ಕಾಗಿ ಕೆಲಸ ಎನ್ನುವ ಧೋರಣೆಯನ್ನು ನಮ್ಮ ಮನಸ್ಸಿನಿಂದ ಕಿತ್ತು ಹಾಕಿ ತಂತ್ರಜ್ಞಾನದ ಸಹಕಾರದೊಂದಿಗೆ ಉನ್ನತದ್ದನ್ನು ಸಾಧಿಸಲು ಹೊರಟರೆ ನಾವು ಸಹ ಬೆಳವಣಿಗೆ ಹೊಂದುತ್ತೇವೆ ಎಂದರು.

ದೇಶದಲ್ಲಿ ಪ್ರತಿವರ್ಷ 21 ಲಕ್ಷ ಪದವಿಧರರು ಕಾಲೇಜುಗಳಿಂದ ಪದವಿ ಪಡೆದು ಹೊರಬರುತ್ತಿದ್ದಾರೆ. ಆದರೆ ಇವರಲ್ಲಿ ಬೆರಳಿಣಿಕೆಯಷ್ಟು ಪದವೀಧರರಿಗೆ ಮಾತ್ರ ಕೆಲಸ ಸಿಗುತ್ತಿದೆ. ಪದವಿಯ ನಂತರ ಮುಂದೇನು ಎಂಬ ಆಲೋಚನೆಯಲ್ಲಿಯೇ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುತ್ತಿದ್ದಾರೆ. ನಾವು ಕೆಲಸಕ್ಕಾಗಿ ಬೇರೆಯವರ ಜತೆ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ. ಇದರ ಬದಲು ನಾವು ತಂತ್ರಜ್ಞಾನ, ಕೌಶಲದ ಜತೆಗೆ ಸ್ಪರ್ಧೆ ಮಾಡಬೇಕು ಎಂದು ಸಲಹೆ ನೀಡಿದರು.

ದೆಹಲಿಯ ಎನ್‌ಎಲ್‌ಎಲ್ ಸಂಸ್ಥೆೆಯ ಆಪ್ತ ಸಲಹೆಗಾರ ಡಾ.ಎಸ್.ನಟೇಶ್, ಜೆಎಸ್‌ಎಸ್-ಎಎಚ್‌ಇಆರ್ ಕುಲಸಚಿವ ಡಾ.ಬಿ. ಮಂಜುನಾಥ್, ಡೀನ್‌ಗಳಾದ ಡಾ.ಕೆ.ಎ.ರವೀಶ್, ಡಾ.ಎಚ್.ಕೆ.ಮಮತಾ, ಸಂಯೋಜಕಿ ಡಾ.ಕೆ.ಪುಷ್ಪಲತಾ, ಸಂಘಟನಾ ಅಧ್ಯಕ್ಷೆೆ ಡಾ.ಪಿ.ಅಶ್ವಿನಿ, ಸಂಘಟನಾ ಕಾರ್ಯದರ್ಶಿ ಡಾ. ದಿವ್ಯಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net