ಮೆಸೇಜ್ ಲಿಂಕ್ ಒತ್ತಿ 65 ಸಾವಿರ ರೂ. ಹೋಯ್ತು!

fraud
Published on

ಉಡುಪಿ: ನಕಲಿ ಬ್ಯಾಂಕ್ ಅಧಿಕಾರಿ ಮಾತು ನಂಬಿ ಮೆಸೇಜ್ ಲಿಂಕ್ ಒತ್ತಿ ಕಿದಿಯೂರು ನಿವಾಸಿಯೊಬ್ಬರು 65 ಸಾವಿರ ರೂ. ಕಳೆದುಕೊಂಡಿದ್ದಾರೆ. ಗಿರೀಶ್ ಕೆ.ಸಿ (36) ಎಂಬುವರು ಹಣ ಕಳೆದುಕೊಂಡವರು. ಅವರು ಎಸ್‌ಬಿಐ ಸಾಗರ ಬ್ರಾಂಚ್‌ನಲ್ಲಿ ಖಾತೆ ಹೊಂದಿದ್ದು, ಬುಧವಾರ ಅಪರಿಚಿತರು ಲಿಂಕ್ ಒಂದನ್ನು ಮೆಸೇಜ್ ಮೂಲಕ ಕಳುಹಿಸಿ, ನಂತರ ಕರೆ ಮಾಡಿ ಬ್ಯಾಂಕ್ ಅಧಿಕಾರಿ ಮಾತನಾಡುತ್ತಿರುವುದಾಗಿ ನಂಬಿಸಿ, ಕೆವೈಸಿ ಅಪ್‌ಡೇಟ್ ಮಾಡಲು ಲಿಂಕ್ ಕ್ಲಿಕ್ ಮಾಡುವಂತೆ ತಿಳಿಸಿದ್ದರು. ಗಿರೀಶ್ ಪೋನ್ ಮಾಡಿರುವುದು ಬ್ಯಾಂಕ್ ಅಧಿಕಾರಿ ಎಂದು ನಂಬಿ ಲಿಂಕ್ ಒತ್ತಿದಾಗ ಖಾತೆಯಿಂದ 3 ಸಲ ಒಟ್ಟು ರೂಪಾಯಿ 65,000 ರೂ. ಹಣ ವಿದ್‌ಡ್ರಾ ಆಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net