

ಬೆಂಗಳೂರು:ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ವಂಚಕರು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ.
ಈ ಸಂಬಂಧ ಕೆಲ ದೂರುಗಳ ಬಂದ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ(ಕೇಂದ್ರ ವಿಭಾಗ)ಎಫ್ಐಆರ್ ದಾಖಲಾಗಿದೆ. ಆಯುಕ್ತರ ಭಾವಚಿತ್ರ, ಹೆಸರು, ಹುದ್ದೆ, ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿಖಾತೆ ಮೂಲಕ ಪಾಲಿಕೆ ಅಧಿಕಾರಿ, ನೌಕರರಿಗೆ,ಸಾರ್ವಜನಿಕರಿಗೆ ವಂಚಿಸಲು ಕಿಡಿಕೇಡಿಗಳು ಮುಂದಾಗಿದ್ದರು.
ಈಗಾಗಲೇ ಖಾತೆ ಡಿಲೀಟ್ ಮಾಡಲಾಗಿದೆ. ನಕಲಿ ಖಾತೆ ತೆರೆದಿರುವ ಅಪರಿಚಿತರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುವಂತೆ ಮುಖ್ಯ ಆಯುಕ್ತರು, ಪೊಲೀಸರಿಗೆ ಮನವಿ ಮಾಡಿದ್ದಾರೆ.