

ಮಂಡ್ಯ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಕೇಳುವ ವಂಚಕರ ಜಾಲ, ಇದೀಗ ಶಾಸಕ ರವಿಕುಮಾರ್ ಗಣಿಗ ಅವರ ಹೆಸರಿನಲ್ಲಿಯೂ ಮೋಸ ಮಾಡಲು ಮುಂದಾಗಿದೆ.
ಶಾಸಕ ರವಿಕುಮಾರ್ ಗಣಿಗ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕೆಲವರಿಗೆ ಸಂದೇಶದ ಮೂಲಕ ಹಣ ಪಡೆಯುವ ಕೃತ್ಯಕ್ಕೆ ಕೈಹಾಕಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಶಾಸಕರು, ಹೊಸ ವರ್ಷದಲ್ಲಿ ಯಾರೋ ನನ್ನ ಖಾತೆ ನಕಲು ಮಾಡಿ ಹಣ ಕೇಳುತ್ತಿದ್ದಾರೆ. ಆದ್ದರಿಂದ ಹುಷಾರಾಗಿರಿ ಎಂದು ತಿಳಿಸಿದ್ದಾರೆ. ಅದೇ ರೀತಿ ಈ ರೀತಿ ಹಲವರಿಗೆ ವಂಚನೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೆಲವರು ಶಾಸಕರಿಗೆ ಸಲಹೆ ನೀಡಿದ್ದಾರೆ.