ನವರತನ್ ಜುವೆಲ್ಲರಿಯಲ್ಲಿ ಸುಳ್ಳು ಲೆಕ್ಕ ತೋರಿಸಿ ಚಿನ್ನ ಲಪಟಾಯಿಸಿದ್ದ ನೌಕರನ ಸೆರೆ

Lambodara biswal Arrest
Published on

ಬೆಂಗಳೂರು : ಎಂ.ಜಿ. ರಸ್ತೆಯ ನವರತನ್ ಜುವೆಲ್ಲರಿ ಮಳಿಗೆಯಲ್ಲಿ ದಾಖಲೆ ತಿದ್ದಿ ಚಿನ್ನಾಭರಣ ಕಳವು ಮಾಡಿದ್ದ ಕಂಪ್ಯೂಟರ್ ಆಪರೇಟರ್‌ನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಲಂಬೋಧರ ಬಿಸ್ವಾಲ್(28) ಬಂಧಿತ. 1 ಕೋಟಿ ರೂ. ಮೌಲ್ಯದ 1.5 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿರುವುದಾಗಿ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ನವರತನ್ ಜುವೆಲ್ಲರಿ ಮಳಿಗೆಯಲ್ಲಿ 6 ವರ್ಷಗಳಿಂದ ಲಂಬೋಧರ ಕೆಲಸ ಮಾಡುತ್ತಿದ್ದ. ಮೊದಲು ಸಹಾಯಕನಾಗಿ ನೌಕರಿಗೆ ಸೇರಿದ ಲಂಬೋಧರ, ಬಳಿಕ ಸೇಲ್ಸ್‌ಮ್ಯಾನ್‌ಯಾಗಿ ಬಡ್ತಿ ಪಡೆದಿದ್ದ. ಆನಂತರ 2 ವರ್ಷಗಳಿಂದ ನವರತನ್ ಜುವೆಲ್ಸರಿ ವ್ಯಾಪಾರದ ಸಂಪೂರ್ಣ ನಿರ್ವಹಣೆ ಮಾಡುವ ಕಂಪ್ಯೂಟರ್ ಆಪರೇಟ್‌ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಮಳಿಗೆಯ ಸಂಪೂರ್ಣ ವ್ಯಾಪಾರದ ಮಾಹಿತಿ ತಿಳಿದಿದ್ದ ಆರೋಪಿ, ಕಂಪ್ಯೂಟರ್‌ನಲ್ಲಿ ಚಿನ್ನದ ವ್ಯಾಪಾರ ಸಂಬಂಧ ಸುಳ್ಳು ಲೆಕ್ಕ ಕೊಟ್ಟು ಚಿನ್ನಾಭರಣ ದೋಚುತ್ತಿದ್ದ. ಬಂದ ಹಣದಲ್ಲಿ ಮೋಜುಮಸ್ತಿ ಮಾಡುತ್ತಿದ್ದ. ಇತ್ತೀಚೆಗೆ ಚಿನ್ನಾಭರಣ ದೋಚಿ ಒಡಿಶಾಗೆ ಪರಾರಿಯಾಗಿದ್ದ. ಈ ಕುರಿತು ಮಳಿಗೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸದಿದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net