

ಮಾನ್ವಿ: ಪಟ್ಟಣದ ಈಶ್ವರ, ನಗರೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಶಿವನ ದೇವಸ್ಥಾನಗಳಲ್ಲಿ ಭಕ್ತರು ಬುಧವಾರ ಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವಾಲಯ, ಧ್ಯಾನ ಮಂದಿರದಲ್ಲಿ ಕೋಟಿ ಲಿಂಗಕ್ಕೆ ವಿಶೇಷ ಪೂಜೆ ಇತರೆ ಶಿವನ ದೇವಾಲಯಗಳಲ್ಲಿ ಬೆಳಗ್ಗೆಯಿಂದ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಿವ ಭಕ್ತರು ಬೆಳಿಗ್ಗೆಯಿಂದ ಉಪವಾಸ, ರಾತ್ರಿ ಜಾಗರಣೆ ನಡೆ ನಡೆಸಿದರು.
ಗಾರಿಗೆ ರಾಶಿ: ಕಲ್ಮಠದಿಂದ ಪ್ರತಿ ವರ್ಷ ಆಚರಿಸುವ ಗಾರಿಗೆ ಜಾತ್ರೆಯಲ್ಲಿ ವಿಶೇಷವಾಗಿ ಶಿವರಾತ್ರಿಯಂದು ಉಪವಾಸ ಇರುವ ಭಕ್ತರಿಗೆ ಗಾರಿಗೆಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು.